ಪ್ಯಾರಿಸ್: ಪೊಲೀಸ್ ವಿರುದ್ಧದ ಪ್ರತಿಭಟನೆಗೆ ನಿಷೇಧ

Update: 2023-07-15 17:24 GMT

Photo : PTI

ಪ್ಯಾರಿಸ್ : ಫ್ರಾನ್ಸ್‍ನ ರಾಜಧಾನಿ ಪ್ಯಾರಿಸ್‍ನಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುವುದನ್ನು ನ್ಯಾಯಾಲಯ ನಿಷೇಧಿಸಿದ್ದು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ತಿಂಗಳ ಆರಂಭದಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಯುವಕನೊಬ್ಬ ಮೃತಪಟ್ಟಿರುವುದನ್ನು ಖಂಡಿಸಿ ಸುಮಾರು 2 ವಾರ ನಿರಂತರ ಪ್ರತಿಭಟನೆ, ದಾಂಧಲೆ, ದೊಂಬಿ ನಡೆದಿದ್ದು ಸಾರ್ವಜನಿಕ ಆಸ್ತಿಗೆ ವ್ಯಾಪಕ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ `17 ವರ್ಷದ ಯುವಕನ ಸಾವಿಗೆ ನೇರವಾಗಿ ಸಂಬಂಧಿಸಿ ರಾಜಧಾನಿ ಪ್ಯಾರಿಸ್‍ನಲ್ಲಿ ಯಾವುದೇ ಗಲಭೆ, ಹಿಂಸಾಚಾರವನ್ನು ನಿಷೇಧಿಸಲಾಗಿದೆ ಎಂದು ಫ್ರಾನ್ಸ್‍ನ ಆಂತರಿಕ ಸಚಿವ ಜೆರಾಲ್ಡ್ ದರ್ಮಾನಿಯನ್ ಘೋಷಿಸಿದ್ದಾರೆ. ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಪ್ರತಿಭಟನಾಕಾರರ ಸಂಘಟನೆ ಪ್ಯಾರಿಸ್‍ನ ಆಡಳಿತಾತ್ಮಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿ ಶನಿವಾರ ತಿರಸ್ಕೃತಗೊಂಡಿದ್ದು ನ್ಯಾಯಾಲಯ ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಇತ್ತೀಚೆಗೆ ನಡೆದ ದಾಂಧಲೆಯ ಗಂಭೀರತೆ, ಪೊಲೀಸ್ ಸಿಬಂದಿಯ ಕೊರತೆ ಮತ್ತು ಇನ್ನಷ್ಟು ಗಲಭೆಯ ಅಪಾಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನ್ಯಾಯಾಲಯದ ಆದೇಶ ತಿಳಿಸಿರುವುದಾಗಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News