ದಿಲ್ಲಿಯ ಕೊಳೆಗೇರಿ ನಿವಾಸಿಗಳಿಗೆ ಮನೆ ನೀಡುವುದಾಗಿ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಅಮಿತ್ ಶಾಗೆ ಸವಾಲೆಸೆದ ಕೇಜ್ರಿವಾಲ್

Update: 2025-01-12 10:30 GMT

ಅರವಿಂದ್ ಕೇಜ್ರಿವಾಲ್,  ಅಮಿತ್ ಶಾ | PTI 

ಹೊಸದಿಲ್ಲಿ: ದಿಲ್ಲಿಯ ಕೊಳಗೇರಿಗಳ ಜನರ ವಿರುದ್ಧ ನೀವು ಹಾಕಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆದರೆ ಮತ್ತು ಕೊಳಗೇರಿಗಳಿಂದ ಹೊರ ಹಾಕಲ್ಪಟ್ಟ ಪ್ರತಿಯೋರ್ವ ವ್ಯಕ್ತಿಗೆ ಪುನರ್ವಸತಿ ಕಲ್ಪಿಸಿದರೆ ಮುಂಬರುವ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಮಿತ್ ಶಾಗೆ ಸವಾಲು ಹಾಕಿದ್ದಾರೆ.

ದಿಲ್ಲಿಯ ಕೊಳಗೇರಿಗಳ ಜನರ ವಿರುದ್ಧ ನೀವು ಹಾಕಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಿರಿ ಮತ್ತು ಅವರನ್ನು ಹೊರಹಾಕಿದ ಅದೇ ಜಮೀನಿನಲ್ಲಿ ಎಲ್ಲರಿಗೂ ಮನೆ ನಿರ್ಮಿಸಿ ಕೊಡುವುದಾಗಿ ನೀವು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ, ಆಗಾದ್ರೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನಾನು ನಿಮಗೆ ಸವಾಲು ಹಾಕುತ್ತೇನೆ. ಇಲ್ಲದಿದ್ದರೆ ಕೇಜ್ರಿವಾಲ್ ಎಲ್ಲಿಯೂ ಹೋಗುವುದಿಲ್ಲ ಎಂದು ದಿಲ್ಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಗೃಹ ಸಚಿವ ಅಮಿತ್ ಶಾಗೆ ಸವಾಲು ಹಾಕಿದ್ದಾರೆ.

ಚುನಾವಣೆಯಲ್ಲಿ ಗೆದ್ದರೆ ದಿಲ್ಲಿಯ ಕೊಳಗೇರಿಗಳನ್ನು ಕೆಡವಲು ಬಿಜೆಪಿ ಉದ್ದೇಶಿಸಿದೆ. ಅವರಿಗೆ ಮೊದಲು ನಿಮ್ಮ ಮತಗಳು ಬೇಕು ಮತ್ತು ಚುನಾವಣೆಯ ನಂತರ ನಿಮ್ಮ ಭೂಮಿ ಬೇಕು. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೊಳೆಗೇರಿ ನಿವಾಸಿಗಳಿಗಾಗಿ ಕೇವಲ 4,700 ವಸತಿಗಳನ್ನು ಮಾತ್ರ ನಿರ್ಮಿಸಿದೆ. ಇದರಿಂದಾಗಿ ನಗರದ 4 ಲಕ್ಷ ಕೊಳೆಗೇರಿ ಕುಟುಂಬಗಳು ಕಂಗಾಲಾಗಿವೆ. ಈ ವೇಗದಲ್ಲಿ ಸಾಗಿದರೆ ಎಲ್ಲರಿಗೂ ವಸತಿ ಒದಗಿಸಲು 1,000 ವರ್ಷಗಳು ಬೇಕಾಗಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News