‘ಕೂಸಿನ ಮನೆ’ಯಾಗಿ ಕಂಗೊಳಿಸಿದ ಶಿಥಿಲ ಶಾಲಾ ಕೊಠಡಿ

Update: 2024-02-19 08:53 GMT

ಮಂಡ್ಯ, ಫೆ.18: ಶಿಥಿಲಗೊಂಡು ಬಳಕೆಯಾಗದೇ ಮುಚ್ಚಿದ್ದ ಶಾಲೆಯ ಕೊಠಡಿ ಈಗ ‘ಕೂಸಿನ ಮನೆ’ಯಾಗಿ ಕಂಗೊಳಿಸುತ್ತಿದೆ. ಇದು ಪಂಚಾಯತ್ ಸದಸ್ಯರ ಕಾಳಜಿಯಿಂದ ಸಾಕಾರಗೊಂಡಿದ್ದು, ಗ್ರಾಮದ ಜನರ ಮೆಚ್ಚುಗೆ ವ್ಯಕ್ತವಾಗಿದೆ.

ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಸರಕಾರಿ ಶಾಲೆಯ ಕೊಠಡಿಯೊಂದು ಶಿಥಿಲಗೊಂಡು ದಶಕಗಳಿಂದ ಬಳಕೆಯಾಗದೇ

ಮುಚ್ಚಿತ್ತು. ಇದನ್ನು ನವೀಕರಣಗೊಳಿಸುವ ಸಂಬಂಧ ಗ್ರಾಪಂ ಸದಸ್ಯ ನಂದೀಶ್‌ಗೌಡ, ಪಿಡಿಒ ಲೀಲಾವತಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಶಿಕ್ಷಣ ಇಲಾಖೆ 4 ಲಕ್ಷ ರೂ. ಬಿಡುಗಡೆ ಮಾಡಿತ್ತು.

ಈ ಅನುದಾನದಲ್ಲಿ ದುರಸ್ತಿಗೊಳಿಸಿದ ಶಾಲಾ ಕೊಠಡಿಯನ್ನು ‘ಕೂಸಿನ ಮನೆ’ಯಾಗಿ ಪರಿವರ್ತನೆ ಮಾಡಲಾಗಿದೆ. ಇತ್ತೀಚೆಗೆ ಇದನ್ನು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗೆ ಹಸ್ತಾಂತರ ಮಾಡಲಾಯಿತು. ಆ ಮೂಲಕ ಗ್ರಾಮಕ್ಕೆ ‘ಕೂಸಿನ ಮನೆ’ ಕೇಂದ್ರ ಬಂದಿದೆ.

ಮಕ್ಕಳ ಕೊರತೆಯಿಂದ ಮುಚ್ಚಿಹೋಗಿದ್ದ ಶಾಲೆಯನ್ನು ಗ್ರಾಪಂ ಸದಸ್ಯ ನಂದೀಶ್‌ಗೌಡ ಅವರು ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಿದ್ದರು. ಅವರ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೃಷ್ಣೇಗೌಡ ಟ್ರಸ್ಟ್‌ನಿಂದ ಹೆಮ್ಮನಹಳ್ಳಿ ಸುತ್ತಮುತ್ತಲ ಗ್ರಾಮಗಳ ಸರಕಾರಿ ಶಾಲೆಗಳಿಗೆ ಟಿವಿ, ಕಂಪ್ಯೂಟರ್, ಮೇಜು, ಬೈಸಿಕಲ್ ಸೇರಿದಂತೆ ಪಠ್ಯ ಪರಿಕರಗಳನ್ನೂ ನಂದೀಶ್‌ಗೌಡ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News