ಚಾಮರಾಜನಗರದಲ್ಲಿ ಶ್ರೀಲಂಕಾ ಕ್ರಿಕೆಟಿಗನಿಂದ ಆರಂಭವಾಗಲಿದೆ ತಂಪು ಪಾನೀಯ ಕಾರ್ಖಾನೆ

Update: 2024-07-01 10:17 GMT

ಚಾಮರಾಜನಗರ: ಶ್ರೀಲಂಕಾ ಕ್ರಿಕೆಟರ್ ಮುತ್ತಯ್ಯ ಮುರುಳೀಧರನ್ ಚಾಮರಾಜ ನಗರದ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸುತ್ತಿರುವ ತಂಪು ಪಾನೀಯ ಕಾರ್ಖಾನೆಯಲ್ಲಿ ನೂರಾರು ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶದ ಆಶಾಭಾವನೆ ಮೂಡಿದೆ.

ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಮುತ್ತಯ್ಯ ಮುರುಳೀಧರನ್ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಲೇ ಕೈಗಾರಿಕಾ ಉದ್ಯಮ ರಂಗಕ್ಕೆ ಕಾಲಿಟ್ಟಿದ್ದಾರೆ. ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ‘ಮುತ್ತಯ್ಯ’ ಬ್ರಾಂಡ್‌ನಲ್ಲಿ ತಂಪು ಪಾನೀಯ ಸ್ಥಾಪಿಸುತ್ತಿದ್ದಾರೆ. ಕಾರ್ಖಾನೆ ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡುವ ಸಾಧ್ಯತೆಗಳಿವೆ.

ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ಸದ್ಯ ಹೆಚ್ಚು ಬಂಡವಾಳ ಹೂಡುತ್ತಿರುವ ಕಾರ್ಖಾನೆ, ಉದ್ಯಮಗಳ ಪೈಕಿ ಮುರುಳೀಧರನ್‌ರವರ ಒಡೆತನದ ಈ ಕಾರ್ಖಾನೆ ಅಗ್ರಪಂಕ್ತಿಯಲ್ಲಿದೆ. ಹೀಗಾಗಿ ಸ್ಥಳೀಯರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ದೊರೆಯಲಿದೆ ಎಂಬ ನಿರೀಕ್ಷೆ ಮನೆ ಮಾಡಿದೆ.

ಮುತ್ತಯ್ಯ ಮುರಳೀಧರನ್ ಅವರು ಆರಂಭದಲ್ಲಿ ಭೂಮಿ ಪಡೆಯುವಾಗ 475 ಕೋಟಿ ರೂ. ಹೂಡಿಕೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಆ ಮೊತ್ತ ಏರಿಕೆಯಾಗಿದೆ.

ಅಲ್ಲದೇ ಅವರ ಕಾರ್ಖಾನೆ ಪ್ರದೇಶವೂ ವಿಸ್ತರಣೆಗೊಂಡಿದೆ. ಹೀಗಾಗಿ ಆರಂಭದಲ್ಲಿ 298 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಲಾಗಿತ್ತು. ಇದೀಗ ಆ ಸಂಖ್ಯೆಯು ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಮುರುಳೀಧರನ್ ರಾಜ್ಯ ಸರಕಾರದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ರವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಚಾಮರಾಜನಗರದ ತಮ್ಮ ಕೈಗಾರಿಕೆ ಬಗ್ಗೆ ಸಮಾಲೋಚಿಸಿದ್ದಾರೆ. ಸದ್ಯದಲ್ಲೇ ತಮ್ಮ ಕೈಗಾರಿಕೆ ಆರಂಭಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಚಾಮನಗರದ ಕೈಗಾರಿಕೆ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಯೊಂದು ಸದ್ಯದಲ್ಲೇ ಕಾರ್ಯಾರಂಭ ಮಾಡುವ ಮುನ್ಸೂಚನೆ ದೊರೆತಂತಾಗಿದೆ.

ವಿಶ್ವದ ಶ್ರೇಷ್ಟ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ರವರ ಒಡೆತನದ ಕಾರ್ಖಾನೆಯು ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆರಂಭದಲ್ಲಿ 40 ಎಕರೆ ಪ್ರದೇಶವನ್ನು ಖರೀದಿಸಿ, 475 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹಾಗೂ ಸ್ಥಳೀಯ 298 ಮಂದಿಗೆ ಉದ್ಯೋಗ ನೀಡುವುದಾಗಿಯು ಘೋಷಿಸಿದ್ದರು. ಇದೀಗ ತಮ್ಮ ಪ್ರದೇಶ ವಿಸ್ತರಣೆಗೆ ಕೋರಿದ್ದಾರೆ.

-ಶಶಿಧರ್, ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಇಲಾಖೆ, ಚಾಮರಾಜನಗರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ.ಅಶ್ವಥ್ ಕುಮಾರ್

contributor

Similar News