ನದಿಯಿಂದ ಮೃತದೇಹಗಳನು್ನ ದಡಕ್ಕೆ ತರುವುದರಲ್ಲಿ ಅಕ್ರಂ ನಿಸ್ಸೀಮ

Update: 2024-01-29 08:42 GMT

ಹಾಸನ, ಜ.28: ಬೇಲೂರಿನ ಅಮೀರ್ ಮೊಹಲ್ಲಾ ನಿವಾಸಿ ಮೊಹಿದೀನ್ ರವರ ಮಗ ಅಕ್ರಂ ಆಟೊ ಚಾಲಕನಾಗಿದ್ದು, ಪುತ್ತು ಎಂಬ ಹೆಸರಿನಿಂದ ಜನ ಕರೆಯುತ್ತಾರೆ.

ಬೇಲೂರು ಸುತ್ತಮುತ್ತಲು ನೀರಿಗೆ ಕಾಲು ಜಾರಿ ಬಿದ್ದಾಗ ಯಾವುದೇ ಜೀವ ಪರಿಕರಗಳಿಲ್ಲದೇ ಜೀವದ ಹಂಗನ್ನು ತೊರೆದು ಮೃತದೇಹವನ್ನು ದಡಕ್ಕೆ ತರುವಲ್ಲಿ ಅಕ್ರಂ ನಿಸ್ಸೀಮ.

ಸುಮಾರು 25 ನೀರಿಗೆ ಬಿದ್ದ ಮೃತದೇಹಗಳನ್ನು ದಡಕ್ಕೆ ತಂದಿದ್ದು, ಅಗ್ನಿ ಶಾಮಕ ದಳಕ್ಕಿಂತ ಹೆಚ್ಚು ನಿಷ್ಠೆಯಿಂದ, ಯಾವುದೇ ಅಪೇಕ್ಷೆ ಇಲ್ಲದೆ ಮಾಡುತ್ತೇನೆ. ಮೂರು ವರ್ಷಗಳ ಹಿಂದೆ ಯಗಚಿ ಎಡದಂಡೆ ಚಿಕ್ಕಬ್ಯಾಡಿಗೆರೆ ನಾಲೆ ಬಳಿ ತಂದೆ ಮಗ ಸ್ನಾನ ಮಾಡಲು ತೆರಳಿದ್ದಾಗ ತಂದೆಯ ಕಣ್ಣೆದುರಿಗೆ ಮಗ ಮುಳುಗಿದ ಮೃತ ದೇಹವನ್ನು ನೀರಿನ ಆಳವನ್ನು ಲೆಕ್ಕಿಸದೇ ಹೊರ ತೆಗೆದಿದ್ದರು. ಕಳೆದ ವರ್ಷ ಬೇಲೂರು ಪಟ್ಟಣದ ಕೆರೆ ಬೀದಿಯ ಗಿರೀಶ್ ಎಂಬಾತ ಬಿಷ್ಠಮ್ಮನ ಕಲ್ಯಾಣಿಗೆ ಬಿದ್ದು ಮೃತಪಟ್ಟಾಗ ಶವ ಹುಡುಕಿ ದಡಕ್ಕೆ ತಂದಿದ್ದು, ವಾರದ ಹಿಂದೆ ಬಂಟೇನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕದೀರ್ ಎಂಬ ವ್ಯಕ್ತಿ, ಬೇಲೂರು ಯಗಚಿ ಡ್ಯಾಂಗೆ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿ ಬಿದ್ದು ಮೃತಪಟ್ಟಾಗ ಅಗ್ನಿ ಶಾಮಕ ದಳ ಹಾಗೂ ಮಂಗಳೂರಿನ ನುರಿತ ತಜ್ಞರು 3 ದಿನಗಳ ಕಾಲಹುಡುಕಾಡಿದರೂ, ಸಿಗದಿದ್ದ ಮೃತದೇಹವನ್ನು ಡ್ಯಾಂನ ಮಧ್ಯಭಾಗಲ್ಲಿ 50ಅಡಿ ಆಳಕ್ಕೆ ಹೋಗಿ ಹೊರ ತೆಗೆದಿದ್ದ. ನೀರಿಗೆ ಬಿದ್ದ ಮೃತ ದೇಹಗಳನ್ನು ಹೊರತೆಗೆದಾಗ, ಸಂತ್ರಪ್ತಿ ಸಿಗುತ್ತದೆ. ಮುಂದೆಯೂ ಈ ಕೆಲಸದಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಾರೆ ಅಕ್ರಂ. ಅವರ ಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಗಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಮಲ್ನಾಡ್ ಮೆಹಬೂಬ್

contributor

Similar News