ಜನಗಣತಿಯಲ್ಲಿ ಯಾವುದೇ ವಿಳಂಬವು ಅಪಾಯಕಾರಿ

Update: 2024-08-08 05:19 GMT

ಎನ್. ರಾಮರಾವ್

ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ

2021ರ ದಶವಾರ್ಷಿಕ ಜನಗಣತಿಯು 2020ರಲ್ಲಿ ಅದರ ಪ್ರಾರಂಭಿಕ ಕೆಲಸಗಳು ಪ್ರಾರಂಭವಾಗಬೇಕಾಗಿತ್ತು. ಜನಗಣತಿಯ ಕಾರ್ಯಾಚರಣೆಯ ಸಲುವಾಗಿ, ಆಡಳಿತಾತ್ಮಕ ಗಡಿಗಳನ್ನು ಗುರುತಿಸುವ ಕಾರ್ಯ ಕನಿಷ್ಠ ಅಕ್ಟೋಬರ್ 2024ರಲ್ಲಿ ಪ್ರಾರಂಭವಾಗುತ್ತವೆ ಎಂಬ ಭರವಸೆಯನ್ನು ಹುಟ್ಟು ಹಾಕಲಾಗಿತ್ತು. ಆದರೆ ಕೇಂದ್ರ ಸರಕಾರವು ಗಡುವನ್ನು ವಿಸ್ತರಿಸಲು ಇದ್ದ ಜೂನ್ 30, 2024ರಂದು ವಿಸ್ತರಿಸುವ ಕಾರ್ಯ ಕೈಗೊಳ್ಳಲಿಲ್ಲ. ಏಕೆಂದರೆ ಕ್ಷೇತ್ರಕಾರ್ಯದ ಬೃಹತ್ ಸಿದ್ಧತೆಗಾಗಿ ಗಡಿಗಳನ್ನು ನಿಗದಿಪಡಿಸಿದ ನಂತರ ಸುಮಾರು ಮೂರು ತಿಂಗಳು ತೆಗೆದುಕೊಳ್ಳುತ್ತದೆ. ಇಂತಹ ನಿಗದಿತ ಕಾರ್ಯಾಚರಣೆಗಾಗಿ 2024-25ರ ಇತ್ತೀಚಿನ ಬಜೆಟ್‌ನಲ್ಲಿ ಕೇವಲ 1,309.46 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದಾಗಲೂ ಜನಗಣತಿಯು ನಡೆಯಬಹುದೆಂಬ ನಿರೀಕ್ಷೆ ಏನೋ ಇತ್ತು. ಆದರೆ 2021-22ರ ಬಜೆಟ್‌ನಲ್ಲಿ ಮೀಸಲಿಡಲಾಗಿದ್ದ 3,768 ಕೋಟಿ ರೂ.ಗಳಿಗೆ ಹೋಲಿಸಿದಾಗ ದಶಕದ ಇಂಥ ಬೃಹತ್ ಪ್ರಯೋಗಕ್ಕೆ ಇತ್ತೀಚಿನ ಬಜೆಟ್‌ನಲ್ಲಿ ಹಂಚಿಕೆ ಗಮನಾರ್ಹವಾಗಿ ಕಡಿತ ವಾಗಿರುವುದರಿಂದ ಹೊಸ ಗಣತಿ ಕಾರ್ಯ ವಿಳಂಬವಾಗಿದ್ದರೂ, ಕೈಗೊಳ್ಳಲಾಗದು ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಸರಕಾರವು ಮುಂದಿನ ಜನಗಣತಿಯ ಹೊಸ ವೇಳಾಪಟ್ಟಿಯ ಪ್ರಕಟಣೆಯನ್ನು ತಡೆಹಿಡಿಯುವುದನ್ನು ಮುಂದುವರಿಸಿದೆ ಎಂದು ಊಹಿಸಲು ಸಾಧ್ಯವಿದೆ.

ಸಮಗ್ರ ಅವಶ್ಯಕತೆ:

ಆದ್ಯತೆಯ ಆಧಾರದ ಮೇಲೆ ಜನಗಣತಿ ನಡೆಸುವುದು ಅತ್ಯಗತ್ಯವಾಗಿದೆ. 2011ರ ನಂತರ ಜನಗಣತಿಯನ್ನು ಕಾರ್ಯಾಚರಣೆ ಮಾಡದಿರುವುದು ನಮ್ಮ ದೇಶದ ಬಹುಪಾಲು ಜನಸಂಖ್ಯೆಯ ಹಲವಾರು ಯೋಜನೆಗಳ ಮತ್ತು ಸೇವೆಗಳ ದಾರಿ ಕಾಣಲು ಸಾಧ್ಯವಾಗುವುದಿಲ್ಲ. ಇದಲ್ಲದೆ ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನುಷ್ಠಾನಗೊಳಿಸಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಪ್ರತಿಶತ 33 ಸ್ಥಾನಗಳನ್ನು ಮೀಸಲಿಡುವುದಕ್ಕಾಗಿ ಜನಗಣತಿಯ ಅವಶ್ಯಕ ಕಾರ್ಯಾಚರಣೆಗಾಗಿ ಕಾಯಲಾಗುತ್ತಿದೆ.

2025- 26ರ ಜನಗಣತಿ ಬಜೆಟ್‌ನಲ್ಲಿ ಸಾಕಷ್ಟು ಕಟ್ಟುಪಾಡುಗಳನ್ನು ಮಾಡಬೇಕಾದದ್ದು ಅತ್ಯಗತ್ಯವಾಗಿದೆ. ಆದ್ದರಿಂದ ಮುಂದೂಡಲ್ಪಟ್ಟ 2021ರ ಜನಗಣತಿಯನ್ನು 2026ರಲ್ಲಿ ಪೂರ್ಣಗೊಳಿಸಬಹುದು. 2025 ರಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಬಹುದು. ಅದು ಮನೆ ಪಟ್ಟಿ ಮತ್ತು ವಸತಿ ಗಣತಿಯನ್ನು ಒಳಗೊಂಡಿರುತ್ತದೆ ಮತ್ತು ಅದು ಪೂರ್ಣಗೊಂಡ ನಂತರ ರಾಷ್ಟ್ರೀಯ ಜನಸಂಖ್ಯೆಯ ನೋಂದಣಿಯನ್ನು (ಎನ್‌ಪಿಆರ್) ನವೀಕರಿಸುವುದಾಗಿದೆ.

ಜನಗಣತಿಯ ಪ್ರಾಥಮಿಕ ವ್ಯವಸ್ಥೆಗಳಾದ ಆಧುನೀಕರಿಸಿದ ನಕ್ಷೆಗಳು ಮತ್ತು ಆಡಳಿತ ಕ್ಷೇತ್ರಗಳ ಪಟ್ಟಿಗಳನ್ನು ಸಿದ್ಧಪಡಿಸುವುದು, ಕರಡು ಜನಗಣತಿಯ ಪ್ರಶ್ನಾವಳಿಗಳ ಪೂರ್ವ ಪರೀಕ್ಷೆ, ಹೆಚ್ಚಿನ ಸಂಖ್ಯೆಯ ಕ್ಷೇತ್ರ ಸಿಬ್ಬಂದಿಗೆ ಜನಗಣತಿ ದತ್ತಾಂಶವನ್ನು ಡಿಜಿಟಲ್‌ನಲ್ಲಿ ಸಂಗ್ರಹಿಸಲು ತರಬೇತಿ ನೀಡುವ ಅಧಿಕಾರಿಗಳು ಮತ್ತು ಮುಖ್ಯ ಸಿಬ್ಬಂದಿಗೆ ತರಬೇತಿ ನೀಡುವುದು ಅಂದರೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕ್ಷೇತ್ರ ಕಾರ್ಯವನ್ನು ಯೋಜಿಸುವುದು, ಸರಂಜಾಮು ಸಾಗಣೆ, ಬಜೆಟ್ ಮಾಡುವುದು ಇವೆಲ್ಲವೂ ಜನಗಣತಿಯ ಮೂಲಕ ಕಳೆದ ಕೆಲವು ವರ್ಷಗಳಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಗಣತಿ ನಿರ್ದೇಶನಾಲಯಗಳಲ್ಲಿ ನಡೆಯುತ್ತವೆ.

ನಾನು ಚೆನ್ನೈಯಲ್ಲಿರುವ ತಮಿಳುನಾಡಿನ ಜನಗಣತಿ ನಿರ್ದೇಶನಾಲಯಕ್ಕೆ ಭೇಟಿ ನೀಡಿದ್ದೇನೆ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದಾಗ ಅವರು ಹೊಸ ಜನಗಣತಿಯನ್ನು ನಿಗದಿ ಪಡಿಸಿದ ನಂತರ ಕಾರ್ಯವನ್ನು ಕೈಗೊಳ್ಳಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ. ಅವರಿಗೆ ತ್ವರಿತವಾಗಿ ಬೇಕಾಗಿರುವುದು ಪುನಶ್ಚೇತನ ತರಬೇತಿ. 2024-25ರ ಬಜೆಟ್‌ನಲ್ಲಿ ಮೀಸಲಿಟ್ಟ 1,309.46 ಕೋಟಿ ರೂ.ಗಳನ್ನು ಜನಗಣತಿ ಇಲಾಖೆಯೂ ಗಣತಿ ಪ್ರದೇಶಗಳ ದೃಢೀಕರಣ, ಪ್ರಶ್ನಾವಳಿ ಅಂತಿಮ ಗೊಳಿಸುವಿಕೆ, ಉದ್ದೇಶಿತ ಡಿಜಿಟಲ್ ಮತ್ತು ಕೋಷ್ಟಕ ರೂಪದಲ್ಲಿ ದತ್ತಾಂಶಗಳ ಸಂಯೋಜನೆಗೆ ಪ್ರಮುಖ ಸಿಬ್ಬಂದಿಯ ಪುನಶ್ಚೇತನ ತರಬೇತಿಯಂತಹ ಹಲವಾರು ಪ್ರಾಥಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬಳಸಿಕೊಳ್ಳಬಹುದು.

2001ರ ಸಂವಿಧಾನದ (84ನೇ ತಿದ್ದುಪಡಿ) ಕಾಯ್ದೆಯನ್ನು ನಿರ್ದಿಷ್ಟವಾಗಿ ರೂಪಿಸಲಾಗಿತ್ತು. 2026ರ ನಂತರ ನಡೆಯುವ ಮೊದಲ ಜನಗಣತಿಯವರೆಗೂ ಕ್ಷೇತ್ರಗಳ ಪುನರ್ ವಿಂಗಡಣೆ ಆಗುವುದಿಲ್ಲ. ಒಂದು ವೇಳೆ ಕೇಂದ್ರ ಸರಕಾರವು 2027ರಲ್ಲಿ ಜನಗಣತಿಯನ್ನು ಕೈಗೊಂಡು ಮತ್ತು ಅದರಿಂದ ಬರುವ ಜನಸಂಖ್ಯೆಯ ಅಂಕಿ ಅಂಶಗಳನ್ನು ಕ್ಷೇತ್ರ ಪುನರ್ ವಿಂಗಡಣೆ ಉದ್ದೇಶಗಳಿಗಾಗಿ ಪಡೆದು ಕೊಳ್ಳಲು ಯೋಚಿಸಿದರೆ, ಕೂಡಲೇ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾತ್ಮಕ ಘಟಕಗಳ ಗಡಿಗಳನ್ನು ಘನೀಕರಿಸುವ(ಜಿಡಿeeziಟಿg) ಹೊಸ ಗಡುವಿನೊಂದಿಗೆ ಜನಗಣತಿಯ ದಿನಾಂಕವನ್ನು ಕೇಂದ್ರ ಶೀಘ್ರದಲ್ಲಿ ಘೋಷಿಸಬೇಕು.

ಸ್ಪಷ್ಟೀಕರಣ:

ದೇಶದಲ್ಲಿ ಸಾಮಾನ್ಯ ನಿವಾಸಿಗಳ ಸಮಗ್ರ ದತ್ತಾಂಶ ಸಂಗ್ರಹಿಸಲು ಸಾಮಾನ್ಯವಾಗಿ ಹಳ್ಳಿಗಳು ಮತ್ತು ಪಟ್ಟಣಗಳು ಮತ್ತು ಇತರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳ ವಿವರದೊಂದಿಗೆ ಎನ್‌ಪಿಆರ್ ಅನ್ನು ಮೊದಲು 2010ರಲ್ಲಿ, ಮನೆ ಪಟ್ಟಿ ಮತ್ತು ವಸತಿ ಗಣತಿಯ ಹಂತದಲ್ಲಿ, 2011ರ ಜನಗಣತಿಯ ಸಮಯದಲ್ಲಿ ಸಿದ್ಧಪಡಿಸಲಾಯಿತು. 2015ರಲ್ಲಿ ಜನನ, ಮರಣ ಮತ್ತು ವಲಸೆಯ ಕಾರಣದಿಂದ ಬದಲಾವಣೆಗಳನ್ನು ಸಂಯೋಜಿಸಲಾಗಿದೆ. ಈ ಪ್ರಕ್ರಿಯೆಯನ್ನು ಪೌರತ್ವ ಕಾಯ್ದೆ, 1955ರ ಅಡಿಯಲ್ಲಿ ಜಾರಿಗೆ ತರಲಾಗಿದೆ. ಮುಂಬರುವ ಜನಗಣತಿಯ ಮನೆ ಪಟ್ಟಿ ಮತ್ತು ವಸತಿ ಗಣತಿ ಕಾರ್ಯಾಚರಣೆಗಳ (ಹಂತ -1) ಸಮಯದಲ್ಲಿ ಎನ್‌ಪಿಆರ್ ಅನ್ನು ನವೀಕರಿಸಲಾಗುತ್ತದೆ.

ಮುಂದಿನ ಜನಗಣತಿಯ ಎನ್‌ಪಿಆರ್‌ನ ಕರಡು ಮಾತೃಭಾಷೆ, ತಂದೆ ಮತ್ತು ತಾಯಿಯ ಜನ್ಮಸ್ಥಳ ಮತ್ತು ಕೊನೆಯ ವಾಸ ಸ್ಥಳ ಮುಂತಾದ ಪ್ರಶ್ನೆಗಳನ್ನು ಹೊಂದಿದೆ. ಇದು 2010ರಲ್ಲಿ ಸಿದ್ಧಪಡಿಸಲಾದ 2011ರ ಜನಗಣತಿಯ ಎನ್‌ಪಿಆರ್‌ನಲ್ಲಿಲ್ಲ. ಪೌರತ್ವ ನಿಯಮಗಳು 2003ರ ಪ್ರಕಾರ ಕೆಲವು ರಾಜ್ಯಗಳು ಮತ್ತು ನಾಗರಿಕ ಸಮೂಹಗಳು ರಾಷ್ಟ್ರೀಯ ನಾಗರಿಕರ ನೋಂದಣಿಯ (ಎನ್‌ಆರ್‌ಸಿ) ಸಂಗ್ರಹ ಕಾರ್ಯಕ್ಕೆ ಮೊದಲ ಹೆಜ್ಜೆ ಆಗಿರುವುದರಿಂದ ಕೆಲವು ರಾಜ್ಯಗಳು ಮತ್ತು ನಾಗರಿಕ ಸಮೂಹ ವಿರೋಧಿಸಿವೆ. ಆದರೆ ಕೇಂದ್ರ ಸರಕಾರವು ಎನ್‌ಪಿಆರ್ ದತ್ತಾಂಶವನ್ನು ಎನ್‌ಆರ್‌ಸಿ ತಯಾರಿಕೆಯಲ್ಲಿ ಉಪಯೋಗಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ.

ಮುಂಬರುವ ಜನಗಣತಿಯ ಮೊದಲ ಹಂತದಲ್ಲಿ ನವೀಕರಿಸಲು ಎನ್‌ಪಿಆರ್ ಸ್ವರೂಪದಲ್ಲಿ ವಿವಾದಾತ್ಮಕ ಪ್ರಶ್ನೆಗಳನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಕೇಂದ್ರವು ತೆಗೆದುಕೊಳ್ಳಬೇಕು.

ಜಾತಿ ಮಾಹಿತಿಯ ಮೇಲೆ:

ಹಿಂದುಳಿದ ಸಮುದಾಯಗಳ ಆರ್ಥಿಕ ಪರಿಸ್ಥಿತಿಯನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಕೇಂದ್ರವು ಜಾತಿ ಆಧಾರಿತ ಜನಗಣತಿಯನ್ನು ನಡೆಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಸೆಪ್ಟಂಬರ್ 23, 2021ರಂದು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಕೇಂದ್ರ ಸರಕಾರವು ಜಾತಿಗಣತಿ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಾಂಪ್ರದಾಯಿಕವಾಗಿ ಮಾಡುವುದನ್ನು ಹೊರತುಪಡಿಸಿ) ಕಾರ್ಯ ಸಾಧ್ಯವಲ್ಲ ಮತ್ತು ಆಡಳಿತಾತ್ಮಕವಾಗಿ ಕಷ್ಟಕರ ಮತ್ತು ತೊಡಕಿನದು ಎಂದು ಹೇಳಿದೆ.

ಮುಂದಿನ ಜನಗಣತಿಯಲ್ಲಿ ಜಾತಿ ಮಾಹಿತಿ ಸಂಗ್ರಹಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಕೇಂದ್ರ ಸರಕಾರ ಈಗಲೇ ಪರಿಗಣಿಸಬೇಕು.

(ಕೃಪೆ: ದಿ ಹಿಂದೂ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎನ್. ಲಿಂಗಪ್ಪ

contributor

Similar News