ಕುಶಾಲನಗರದಲ್ಲಿ ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಿ ಆರಂಭ

Update: 2024-01-13 06:42 GMT

ಮಡಿಕೇರಿ, ಜ.12: ಕೊಡಗು ಕ್ರೀಡೆಯ ತವರೂರು. ಸದಾ ಕ್ರೀಡಾ ಚುಟುವಟಿಕೆಗಳಿಂದ ಕೂಡಿರುವ ಜಿಲ್ಲೆ. ಜನವರಿಯಿಂದ ಮೇ ವರೆಗೆ ಬಿಡುವಿಲ್ಲದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯವಾಳಿಗಳು ನಡೆಯುತ್ತವೆ. ಅದರಲ್ಲೂ ವಿಶೇಷವಾಗಿ ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ಅತೀ ಹೆಚ್ಚು ಐಪಿಎಲ್ ಮಾದರಿಯ ಲೀಗ್ ಪಂದ್ಯಾವಳಿ ಆಯೋಜನೆಗೊಳ್ಳುತ್ತಿರುತ್ತವೆ.

ಕೊಡಗು ಜಿಲ್ಲೆಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಎರಡು ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿರುವ ಐಪಿಎಲ್ ಮಾದರಿಯ ಲೀಗ್ ಅಕುಲ್ ಟೂರಿಸಮ್ ಪ್ರಾಯೋಜಕತ್ವದಲ್ಲಿ ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್ ಸೀಸನ್-1 ಜ.12ರಂದು ಆರಂಭಗೊಂಡಿದ್ದು, ಜ.15ರವರೆಗೆ ಕುಶಾಲನಗರದ ಜಾತ್ರಾ ಮೈದಾನದಲ್ಲಿ ನಡೆಯಲಿದೆ.

ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 1,99,999 ರೂ ಹಾಗೂ ಆಕರ್ಷಕ ಟ್ರೋಫಿ,ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 99,999 ರೂ ಹಾಗೂ ಆಕರ್ಷಕ ಟ್ರೋಫಿ,ತೃತೀಯ ಸ್ಥಾನ ಪಡೆಯುವ ತಂಡಕ್ಕೆ 49,999 ರೂ ಹಾಗೂ ಆಕರ್ಷಕ ಟ್ರೋಫಿ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 9,999 ರೂ. ಹಾಗೂ ಟ್ರೋಫಿ ಸಿಗಲಿದೆ ಮತ್ತುಭಾಗವಹಿಸುತ್ತಿರುವ ಎಲ್ಲ ಫ್ರಾಂಚೈಸಿಗಳಿಗೆ ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ.

ಮೂರು ಜಿಲ್ಲೆಗಳ 210ಆಟಗಾರರು: ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೊಡಗು ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ತಾಲೂಕು ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಆಟಗಾರರಿಗೆ ಅವಕಾಶ ನೀಡಲಾಗಿದೆ. ಒಟ್ಟು 210 ಆಟಗಾರರು ಬಿಡ್ಡಿಂಗ್ ಮುಖಾಂತರ 15 ತಂಡಗಳಿಗೆ ಬಿಕರಿಯಾಗಿದ್ದಾರೆ.

ಕೊಡಗಿನ ಗೋಣಿಕೊಪ್ಪ, ಕುಶಾಲನಗರ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು, ಕೊಣನೂರಿನವರು ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಪ್ರತೀ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆಯುವ ಆಟಗಾರನಿಗೆ 200 ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತಿದೆ. ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್ ಹಾಗೂ ಮ್ಯಾನ್ ಆಫ್ ದಿ-ಸೀರಿಯಸ್ ಪಡೆಯುವ ಆಟಗಾರನಿಗೆ ಗೇರ್-ಬೈಸಿಕಲ್ ಪ್ರಶಸ್ತಿ ನೀಡಲಾಗುತ್ತಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯಮಟ್ಟದ ತೀರ್ಪುಗಾರರು ಪಂದ್ಯವಾಳಿಯನ್ನು ನಿಯಂತ್ರಿಸಲಿದ್ದಾರೆ.ಲೀಗ್ ಮಾದರಿಯ ಪಂದ್ಯವು ಆರು ಹಾಗೂ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವು ಏಳು ಓವರ್‌ಗಳಿಗೆ ನಡೆಯಲಿದೆ. ಕೊಡಗು ಜಿಲ್ಲೆಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಎರಡು ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿವೆ. ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ 15 ಫ್ರಾಂಚೈಸಿಗಳು ಭಾಗವಹಿಸುತ್ತಿವೆ.

ಅಕುಲ್ ಮಹದೇವಪ್ಪ, ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಕ

ಕೊಡಗು ಜಿಲ್ಲೆಯ ಟೆನ್ನಿಸ್ ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ಲಕ್ಷ ರೂ. ನಗದು ಬಹುಮಾನ ನೀಡಿ, ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಕುಶಾಲನಗರದಲ್ಲಿ ನಡೆಯುತ್ತಿವೆ. ಕುಶಾಲನಗರದಲ್ಲಿ ಸುಸಜ್ಜಿತವಾದ ಆಟದ ಮೈದಾನ ಕೊರತೆ ಇದೆ. ಜಾತ್ರಾ ಮೈದಾನವನ್ನು ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಕಳೆದ ಒಂದು ವಾರದಿಂದ ಆಯೋಜಕರು ಸಜ್ಜುಗೊಳಿಸುತ್ತಿದ್ದಾರೆ. ಜಾತ್ರಾ ಮೈದಾನವನ್ನು ಆಧುನೀಕರಣಗೊಳಿಸಿ, ಸರಕಾರ ತಾಲೂಕು ಮೈದಾನವನ್ನಾಗಿ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಕ್ರೀಡಾಕೂಟ ನಡೆಯುವ ಕುಶಾಲನಗರದಲ್ಲಿ ತಾಲೂಕು ಮೈದಾನದ ಅಗತ್ಯವಿದೆ. ಇದರ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸಬೇಕಾಗಿದೆ.

ಜಯಪ್ರಕಾಶ್,

ಟೀಮ್ ಮಂಜೇಶ್ ತಂಡದ ಕೋಚ್

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News