ಪುತ್ತೂರು: ಹಾಡಹಗಲೇ ಯುವತಿಯ ಕೊಲೆ; ವಿಮೆನ್ ಇಂಡಿಯಾ ಮೂವ್ಮೆಂಟ್(WIM) ಖಂಡನೆ
ಪುತ್ತೂರು: ನಗರದ ಮಹಿಳಾ ಪೋಲಿಸ್ ಠಾಣಾ ಬಳಿಯಲ್ಲಿ ಪದ್ಮರಾಜ್ ಎಂಬ ಯುವಕನೋರ್ವ ಹಾಡಹಗಲೇ ಗೌರಿ ಎಂಬ ಯುವತಿಯನ್ನು ಚಾಕು ಇರಿದು ಕೊಲೆ ನಡೆಸಿದ ಕೃತ್ಯಕ್ಕೆ ಪುತ್ತೂರು ವಿಧಾನಸಭಾ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಖಂಡನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪುತ್ತೂರು ವಿಧಾನಸಭಾ WIM ಕಾರ್ಯದರ್ಶಿ ಝಾಹಿದಾ ಸಾಗರ್ ಅವರು ಈ ಕೊಲೆಗಾರ 4 ವರ್ಷಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ,ಹಾಗೂ ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಸಹ ಪೋಲಿಸರು ಈತನ ವಿರುದ್ಧ ಕಠಿಣ ಕ್ರಮ ಜರುಗಿಸದೇ ಇದ್ದ ಕಾರಣದಿಂದ ಆತನ ಕಿರುಕುಳ ಮುಂದುವರಿದು ಇಂದು ದುರಂತ ಅಂತ್ಯಕಂಡಿದೆ.
ಕೃತ್ಯ ನಡೆದು ಕೆಲವೇ ಗಂಟೆಗಳ ಅವಧಿಯಲ್ಲಿ ಆರೋಪಿಯ ಬಂಧನ ನಡೆದಿರುವುದು ಸ್ವಾಗತರ್ಹ ವಿಚಾರವಾದರೂ ಪೋಲಿಸ್ರು ಈ ಹಿಂದೆ ಪ್ರಕರಣ ದಾಖಲಾಗಿದ್ದಾಗಲೇ ಎಚ್ಚೆತ್ತುಕೊಂಡಿರುತ್ತಿದ್ದರೆ ಇಂದು ಈ ದುರಂತ ನಡೆಯುತ್ತಿರಲಿಲ್ಲ.
2018 ಫೆಬ್ರವರಿ ತಿಂಗಳಲ್ಲಿ ಸುಳ್ಯದಲ್ಲೂ ಇದೇ ರೀತಿಯ ಕೃತ್ಯ ನಡೆದು ಅಕ್ಷತಾ ಎಂಬ ಕಾಲೇಜ್ ವಿಧ್ಯಾರ್ಥಿನಿಯನ್ನು ಕಾರ್ತಿಕ್ ಎಂಬಾತ ಹತ್ಯೆ ಮಾಡಿದ್ದ. ಹಾಗಾಗಿ ಪೋಲಿಸ್ ಇಲಾಖೆ ಇಂತಹ ಪ್ರಕರಣಗಳು ಬಂದಾಗ ಕ್ಷುಲ್ಲಕ ವಿಚಾರ ಎಂದು ಭಾವಿಸದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆಯಲ್ಲಿ ಯಾವುದೇ ವೈಫಲ್ಯವಾಗದಂತೆ ಆರೋಪಿಗೆ ಕಠಿಣ ಶಿಕ್ಷೆ ಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಬೇಕು. ಮಾತ್ರವಲ್ಲ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಮಹಿಳೆಯರ ಭದ್ರತೆಯನ್ನು ಖಾತ್ರಿಪಡಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಎಂದು ಆಗ್ರಹಿಸಿದ್ದಾರೆ..