ಪ್ರಧಾನಿ ಮೋದಿ 11 ವರ್ಷಗಳಿಂದ ಸುಳ್ಳು ಹೇಳುತ್ತಿದ್ದಾರೆ: ಸಚಿವ ಸಂತೋಷ್ ಲಾಡ್

Update: 2025-01-20 16:07 IST
ಪ್ರಧಾನಿ ಮೋದಿ 11 ವರ್ಷಗಳಿಂದ ಸುಳ್ಳು ಹೇಳುತ್ತಿದ್ದಾರೆ: ಸಚಿವ ಸಂತೋಷ್ ಲಾಡ್

ಸಚಿವ ಸಂತೋಷ್ ಲಾಡ್

  • whatsapp icon

ರಾಯಚೂರು: ಪ್ರಧಾನಿ ಮೋದಿಯವರು ಪ್ರತಿ ಚುನಾವಣೆಯಲ್ಲಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಪ್ರತಿ ಚುನಾವಣೆಗೂ ಅವರೇ ಪ್ರಚಾರ ಮಾಡುತ್ತಾರೆ. 11 ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ, ಕೇವಲ ಭಾಷಣ ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಟೀಕಿಸಿದರು.

ಪ್ರಧಾನಿ ಮೋದಿಯವರ 11 ವರ್ಷಗಳ ಹಿಂದಿನ ಭಾಷಣ ಕೇಳಿದರೆ ಜನರಿಗೆ ನಿಜ ತಿಳಿಯುತ್ತದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಖೇಲೋ ಇಂಡಿಯಾ ಯೋಜನೆಯಗಳ ಪ್ರಗತಿ ಏನಾಗಿದೆ? ಮಾಧ್ಯಮಗಳು ಬಿಜೆಪಿ ನಾಯಕರಿಗೆ ಇದರ ಬಗ್ಗೆ ಪ್ರಶ್ನೆ ಕೇಳಬೇಕು ಎಂದು ಹೇಳಿದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ’ ಎಂಬ‌ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಮನಸ್ಥಿತಿ ತೋರಿಸುತ್ತದೆ, ಭಾಗವತ್ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರವಲ್ಲದೆ ದೇಶದ ಇಡೀ ನಾಗರಿಕರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News