ರಾಯಚೂರು | ಪ್ರತ್ಯೇಕ ಅಪಘಾತ ಪ್ರಕರಣ ; ಇಬ್ಬರು ಮೃತ್ಯು
ರಾಯಚೂರು : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಬೈಕ್ ಗೆ ಎಚ್‌ಪಿ ಗ್ಯಾಸ್ ತುಂಬಿದ ಗೂಡ್ಸ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಲಿಂಗಸೂಗೂರು ತಾಲೂಕಿನ ಹೊಸಗುಡ್ಡ ಗ್ರಾಮದ ಬಸವರಾಜ (25) ಮೃತಪಟ್ಟಿದ್ದಾರೆ. ಜಾಲಹಳ್ಳಿ ಮಾರ್ಗವಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ತೆರಳುತ್ತಿರುವಾಗ ಜಾಲಹಳ್ಳಿ ಸಮಿಪದ ಕರಡಿಗುಡ್ಡ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಎಚ್ ಪಿ ಗ್ಯಾಸ್ ತುಂಬಿದ ಗೂಡ್ಸ್ ಲಾರಿ ಬೈಕ್ ಸವಾರನ ಮೈಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಪ್ರಕರಣ :
ಕೆಎಸ್ಸಾರ್ಟಿಸಿ ಸಾರಿಗೆ ಬಸ್ ಪಾದಚಾರಿಗೆ ಢಿಕ್ಕಿಯಾಗಿ ಜಾಲಹಳ್ಳಿ ಗ್ರಾಮದ ದುರುಗಮ್ಮ ರಾಂಪಳ್ಳಿ (72) ಮೃತಪಟ್ಟದಾರೆ ಎಂದು ತಿಳಿದುಬಂದಿದೆ.
ಪಾದಾಚಾರಿ ವೃದ್ದೆ ಗೊಲಪಲ್ಲಿಗೆ ತೆರಳಿ ಮರಳಿ ಬರುತ್ತಿರುವಾಗ ಸುರಪೂರ-ಲಿಂಗಸ್ಗೂರ ಮುಖ್ಯರಸ್ತೆಯ ತಿಂತಿಣಿ ಬ್ರೀಜ್ ಗ್ರಾಮದ ವಾಲ್ಮೀಕಿ ವೃತ್ತದ ಮುಂಬಾಗದಲ್ಲಿ ದುರುಗಮ್ಮ ರಸ್ತೆ ದಾಟುತ್ತಿರುವಾಗ ಕೆಎಸ್ಸಾರ್ಟಿಸಿ ಬಸ್, ಚಾಲಕನ ನಿರ್ಲಕ್ಷ್ಯತನದಿಂದ ಮಹಿಳೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಸಿಪಿಐ ಗುಂಡುರಾವ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.