ರಾಯಚೂರು | ಕೆರೆ ಪ್ರದೇಶದ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಒತ್ತಾಯ
ರಾಯಚೂರು : ನಗರದ ಮೀರಾಬಾಯಿ ಕುಂಟಾದಲ್ಲಿನ ಕೆರೆಯ ಅಭಿವೃದ್ಧಿಗಾಗಿ ಸರ್ವೆ ಕಾರ್ಯಕೈಗೊಂಡಿದ್ದು, ಇದರಿಂದ ಕೆರೆ ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕ ಎದುರಾಗಿದೆ. ಸ್ಥಳೀಯ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಿ ಕೆರೆ ಅಭಿವೃದ್ಧಿ ಕಾರ್ಯಕೈಗೊಳ್ಳಬೇಕು ಎಂದು ಜನಾಂದೋಲನ ಗುಂಪಿನ ಸಂಘಟನೆಯ ಅಧ್ಯಕ್ಷ ಯು.ಆಂಜನೇಯ ಒತ್ತಾಯಿಸಿದ್ದಾರೆ.
ನಗರದಲ್ಲಿರುವ ಕೆರೆಗಳ ಅಭಿವೃದ್ಧಿಗಾಗಿ ಈಚೆಗೆ ಸಣ್ಣ ನೀರಾವರಿ ಇಲಾಖೆಯಿಂದ ಸರ್ವೆ ಕಾರ್ಯ ಕೈಗೊಂಡಿರುವುದರಿಂದ ಬಡವರು, ದೀನದಲಿತರು, ನಿರ್ಗತಿಕರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರಿಗೆ ಭೀತಿ ಶುರುವಾಗಿದೆ. ಬಹುತೇಕ ನಿವಾಸಿಗಳಿಗೆ ನಗರಸಭೆಯಿಂದ ಕೆರೆ ಪ್ರದೇಶದಲ್ಲಿ ಸಣ್ಣ ನಿವೇಶನಗಳನ್ನು ಹಂಚಿಕೆ ಮಾಡಿ ವಾಸಿಸಲು ಸಹಕರಿಸಲಾಗಿದೆ. ಸರಕಾರದ ವಸತಿ ಯೋಜನೆ ಮತ್ತು ಕರ್ನಾಟಕ ಗೃಹ ಮಂಡಳಿಯಿಂದ ವಸತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ತಿಮ್ಮಾರೆಡ್ಡಿ, ನಲ್ಲಾರೆಡ್ಡಿ, ವೆಂಕಟೇಶ ಸಾಗರ, ಎಸ್.ಕೆ ನಾಗರೆಡ್ಡಿ, ಸಿ.ಬಿ ವೀರೇಶ, ಬಿ.ಈರಣ್ಣ ಉಪಸ್ಥಿತರಿದ್ದರು.