ರಾಯಚೂರು | ಇಂಡಿಯನ್ ರಾಯಲ್ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿಗೆ ವಾಜಿದ್ ಸಾಜಿದ್ ಆಯ್ಕೆ
Update: 2024-12-02 16:46 GMT
ರಾಯಚೂರು : ಮಾನ್ವಿ ಪಟ್ಟಣದ ಖ್ಯಾತ ಚಿತ್ರ ಕಲಾವಿದ ವಾಜಿದ್ ಸಾಜಿದ್ ಅವರು ಇಂಡಿಯನ್ ರಾಯಲ್ ಅಕಾಡೆಮಿಯ 2024ನೇ ಸಾಲಿನ ರಾಷ್ಟೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಮೂವರು, ಮಹಾರಾಷ್ಟ್ರ ಹಾಗೂ ರಾಜಸ್ಥಾನದ ತಲಾ ಒಬ್ಬ ಕಲಾವಿದರು ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ವಾಜಿದ್ ಸಾಜಿದ್ ಅವರು ರಚಿಸಿದ ʼಮದರ್ ತೆರೇಸಾʼ ಕಲಾಕೃತಿಗೆ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಡಿ.24 ರಂದು ಕಲಬುರಗಿಯ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಇಂಡಿಯನ್ ರಾಯಲ್ ಅಕಾಡೆಮಿಯ 20ನೇ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಎ.ಎ.ಆಲಮೇಲಕರ್ ಪ್ರಶಸ್ತಿ ಹಾಗೂ 10ಸಾವಿರ ರೂ. ನಗದು ಬಹುಮಾನ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.