ರಾಯಚೂರು | ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲಿಕೋತ್ಸವ ಕಾರ್ಯಕ್ರಮ
ರಾಯಚೂರು : ಗ್ರಾಮೀಣ ಸೊಗಡಿನ ಸಂಸ್ಕೃತಿ ವೈಭವ ಇನ್ನಷ್ಟು ಗಟ್ಟಿಗೊಳಿಸುವ ಜೊತೆಗೆ ಅನೇಕ ಕಲಾತ್ಮಕ ಸಂಸ್ಕೃತಿ ಚಟುವಟಿಕೆಗಳಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪಾಲಕರು ಕಣ್ತುಂಬಿ ನೋಡುವ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ್ ಹೇಳಿದ್ದಾರೆ.
ದೇವದುರ್ಗ ಪಟ್ಟಣದ ಡಾನ್ ಬಾಸ್ಕೋ ಶಾಲಾ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿ ಎಂಬುವುದು ಕಲಾ ಪ್ರತಿಭೆ. ಮಕ್ಕಳ ಪ್ರತಿಭೆ ಹೊರ ತರಲು ಇಂತಹ ಸೂಕ್ತ ವೇದಿಕೆ ಸಹಕಾರಿ. ಸೋಲು ಗೆಲುವು ಎನ್ನದೆ ಪಾಲ್ಗೊಳ್ಳುವುದು ಮುಖ್ಯ. ನಿರ್ಣಾಯಕರು ಉತ್ತಮ ತೀರ್ಪು ನೀಡುವ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿಎಪಿಎಂಸಿ ಅಧ್ಯಕ್ಷ ಆದನ್ ಗೌಡ ಬುಂಕಲ ದೊಡ್ಡಿ,ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ್, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ್ ಪೂಜಾರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರಾಯ ಶಾಖೆ, ಶರಣಪ್ಪ ಬಳೆ, ರಾಮಣ್ಣ ನಾಯಕ ಕರಡಿಗುಡ್ಡ, ರೇಣುಕ ಮಯೂರ ಸ್ವಾಮಿ, ವಿರೂನ್ ಗೌಡ ನಾಗಡದಿನ್ನಿ, ಶಿಕ್ಷಣ ಸಂಯೋಜಕ ಸುರೇಶ ಪಾಟೀಲ್, ಡಾನ್ ಬಾಸ್ಕೋ ಶಾಲೆಯ ಎಜಿ ಫಾದರ್, ಸಿ.ಆರ್.ಪಿ ಬಾಬು ಅಡಗಲಿ, ವಲಯದ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.