ರಾಯಚೂರು | ವಿವಾದಾತ್ಮಕ ಹೇಳಿಕೆ ನೀಡಿದ ಸ್ವಾಮೀಜಿ, ಯತ್ನಾಳ್ ವಿರುದ್ಧ ಕ್ರಮಕ್ಕೆ ಭೀಮ್ ಆರ್ಮಿ ಆಗ್ರಹ
ರಾಯಚೂರು : ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹಾಗೆಯೇ ವಿಶ್ವಗುರು ಬಸವಣ್ಣನವರ ವಿರೋಧಿಸಿ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೇವದುರ್ಗ ಭೀಮ್ ಆರ್ಮಿ ಘಟಕದಿಂದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಪದೇ ಪದೇ ಸಂವಿಧಾನ ವಿರೋಧಿ ಹೇಳಿಕೆಯಿಂದ ದೇಶದ ಸಮಸ್ತ ದಲಿತರು, ಹಿಂದುಳಿದವರು, ಶೋಷಿತರು, ಧಮನಿತರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ತಕ್ಷಣವೇ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇಂತಹ ಹೇಳಿಕೆಗಳು ಮುಂದುವರೆದರೆ ರಾಜ್ಯಾದ್ಯಾಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪೂರಿ ಎಮ್.ಆರ್.ಎಚ್.ಎಚ್.ಎಸ್, ಗೌರವಾಧ್ಯಕ್ಷ ಬಸವರಾಜ ಎಮ್ ಪಾಟೀಲ್, ಗುಂಡಪ್ಪ ನಾಯಕ, ವಿಶ್ವನಾಥ ಬಲ್ಲಿದೇವ, ಮೌನೇಶ್ ಗಾಣದಾಳ , ಶಬ್ಬೀರ್ ಭುವಾಜಿ , ಸದ್ದಾಂ ಹುಸೇನ್ , ಆಸೀಫ್ ಖುರೇಷಿ ಇನ್ನಿತರರು ಹಾಜರಿದ್ದರು.