ರಾಯಚೂರು | ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಎಡಿ ಭೇಟಿ; ಪರಿಶೀಲನೆ

Update: 2025-03-11 14:49 IST
ರಾಯಚೂರು | ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಎಡಿ ಭೇಟಿ; ಪರಿಶೀಲನೆ
  • whatsapp icon

ರಾಯಚೂರು : ರಾಯಚೂರು ತಾಲೂಕಿನ ಹಿರಾಪೂರು ಮತ್ತು ಗಿಲ್ಲೇಸೂಗುರು ಗ್ರಾಮ ಪಂಚಾಯತ್‌ ಗಳಿಗೆ ಇಂದು ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕ ಹನುಮಂತ ಭೇಟಿ ನೀಡಿ ಪರಿಶೀಲಿಸಿದರು.

ರಾಯಚೂರು ತಾಲೂಕಿನ ಹಿರಾಪೂರು ಮತ್ತು ಗಿಲ್ಲೇಸೂಗುರು ಗ್ರಾಮ ಪಂಚಾಯತ್‌ ಗಳಲ್ಲಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಂತರ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಕೂಲಿಕಾರರು ಪ್ರಧಾನ ಮಂತ್ರಿ ಸುರಕ್ಷಾ ಭೀಮಾದಡಿ ವಿಮೆ ಸೌಲಭ್ಯವನ್ನು ಮಾಡಿಸಿಕೊಳ್ಳಬೇಕು. ಈ ಸೌಲಭ್ಯ ನೀಡುವುದಕ್ಕಾಗಿ ಪ್ರಗತಿ ಕೃಷ್ಣ ಬ್ಯಾಂಕ್ ಗಿಲ್ಲೇಸೂಗುರು ಬ್ರಾಂಚ್ ಅಧಿಕಾರಿ, ಸಿಬ್ಬಂದಿಯವರು ಕಾಮಗಾರಿ ಸ್ಥಳಕ್ಕೆ ಸೌಲಭ್ಯ ಒದಗಿಸಲು ಬಂದಿದ್ದಾರೆ. ತಪ್ಪದೇ ಎಲ್ಲಾ ಕೂಲಿಕಾರರು ಈ ವಿಮೆ ಸೌಲಭ್ಯ ಪಡೆಯಲು ಕೂಲಿಕಾರರಿಗೆ ತಿಳಿಸಿದರು.

ನರೇಗಾ ಯೋಜನೆಯಡಿ ನಿರಂತರವಾಗಿ ಕೆಲಸ ನೀಡಲಾಗುತ್ತಿದೆ. ಉತ್ತಮವಾಗಿ ಕೆಲಸ ಮಾಡಲು ತಿಳಿಸಿದರು. ಅದೇ ರೀತಿಯಾಗಿ ಎಲ್ಲಾ ಮೇಟ್ ರವರು ಪ್ರತಿ ದಿನದ ಹಾಜರಾತಿ ಶೇ.100 ರಷ್ಟು ಎನ್ಎಮ್ಎಮ್ಎಸ್ ತಂತ್ರಾಂಶದಲ್ಲಿ ಅಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ರವಿ ಕುಮಾರ್, ಫೀಲ್ಡ್ ಆಫೀಸರ್ ಯಲ್ಲಾಸ್ವಾಮಿ, ಪವನ್ ಕುಮಾರ್ ಜಗದೀಶ್, ಇಮಾನವೇಲ್ ಮತ್ತು ಗ್ರಾ.ಪಂ‌ ಸಿಬ್ಬಂದಿ ಮೇಟ್ ಮತ್ತು ಕೂಲಿಕಾರರು ಉಪಸ್ಥಿತರಿದ್ದರು..

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News