ರಾಯಚೂರು | ಎ.10 ರಿಂದ 30ರವರೆಗೆ ಮಕ್ಕಳ ಬೇಸಿಗೆ ರಂಗ ಶಿಬಿರ ; ಲಕ್ಷ್ಮಣ ಮಂಡಲಗೇರಾ

ರಾಯಚೂರು : ನಗರದ ಚಂದ್ರಬಂಡಾ ರಸ್ತೆಯ ಇಂಡೋ ಇಂಗ್ಲಿಷ್ ಶಾಲೆಯಲ್ಲಿ ‘ರಂಗ ಕನಸು ರಂಗ ಕೇಂದ್ರ ಮಂಡಲಗೇರಾ " ರಂಗ ಸಂಸ್ಥೆಯಿಂದ ಎ.10ರಿಂದ 30 ರವರೆಗೆ ಮಕ್ಕಳ ಬೇಸಿಗೆ ರಂಗ ಶಿಬಿರ ಆಯೋಜಿಸಲಾಗಿದೆ ಎಂದು ಸಾಣೇಹಳ್ಳಿ ರಂಗ ಶಾಲೆಯ ರಂಗ ಪದವೀಧರ ಹಾಗೂ ರಂಗ ನಿರ್ದೇಶಕರಾದ ಲಕ್ಷ್ಮಣ ಮಂಡಲಗೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಅಭಿನಯ ತರಗತಿ, ಹಾಡು, ಕುಣಿತ, ಕೋಲಾಟ, ಚಿತ್ರಕಲೆ, ಮಣ್ಣಿನ ಆಟಿಕೆಗಳ ತಯಾರಿ, ಪೇಪರ್ ಮಾಸ್ಕ್, ರಂಗಾಟಗಳು, ಮುಖವಾಡ ತಯಾರಿ , ಮಕ್ಕಳು ಕಥೆ ಹೇಳುವ ಮತ್ತು ಕಥೆ ಕಟ್ಟುವ ತರಗತಿ, ಮೂಕಾಭಿನಯ, ಪರಿಸರದ ಮೇಲಿನ ಉಪನ್ಯಾಸ, ಸಾಂಸ್ಕೃತಿಕ ವ್ಯಕ್ತಿತ್ವ ವಿಕಸನ, ನೆನಪಿನ ಶಕ್ತಿ ಗ್ರಹಿಕೆ, ಮಕ್ಕಳಿಂದ ನಾಟಕ ತಯಾರಿ ಹಾಗೂ ಪ್ರದರ್ಶನ ನೀಡುವುದು ಸೇರಿದಂತೆ ಹತ್ತು ಹಲವು ಸೃಜನಾತ್ಮಕ ಕಲೆಗಳ ತರಗತಿಗಳನ್ನು ಕಲಿಸಲಾಗುತ್ತದೆ.
ಮಕ್ಕಳಿಗೆ ರಂಗಭೂಮಿಯ ಒಲವು ಮೂಡಿಸುವುದು, ಮೌಲ್ಯ, ವೈಚಾರಿಕತೆ, ಪರಂಪರೆ, ಮಕ್ಕಳ ಗ್ರಹಿಕೆ ಮತ್ತು ಆಲೋಚನಾ ಕ್ರಮ ಹೆಚ್ಚುಸುವುದು, ಎಲ್ಲವನ್ನೂ ಮಕ್ಕಳು ತಾವೇ ವಿವೇಚಿಸಲು ಅನುಕೂಲ ಆಗುವಂತಹ ವಾತಾವರಣವನ್ನು ರಂಗಭೂಮಿ ಹೇಳಿಕೊಡುತ್ತದೆ. ರಂಗಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಮಕ್ಕಳನ್ನು ಮಾನವೀಯವನ್ನಾಗಿಸುವುದಲ್ಲದೇ ಅರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಮುಖ್ಯ ಕಾರಣವಾಗಿಸುತ್ತದೆ.
ರಜೆಯ ಅವಧಿಯಲ್ಲಿ ಮಕ್ಕಳು ಮೊಬೈಲ್ ತಂತ್ರಜ್ಞಾನದಿಂದ ದೂರ ಉಳಿಸಬೇಕೆನ್ನುವ ಮತ್ತು ಕಲೆಯಲ್ಲಿ ಆಸಕ್ತಿ ಇರುವ ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಬೇಕಾದರೆ ಮಾ.30 ರೊಳಗೆ ನೊಂದಣಿ ಮಾಡಿಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9901088146 ಅಥವಾ Gmail: rangakanasu@gmail.comಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.