ರಾಯಚೂರು | ಕರ್ತವ್ಯ ಲೋಪ, ನಿರ್ಲಕ್ಷ್ಯ : ಪಿಎಸ್ಐ ಅಮಾನತು
Update: 2024-12-07 03:58 GMT
ರಾಯಚೂರು: ಕರ್ತವ್ಯದಲ್ಲಿ ಲೋಪ ಮತ್ತು ನಿರ್ಲಕ್ಷ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡಪನೂರು ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅವಿನಾಶ್ ಕಾಂಬ್ಳೆ ಅಮಾನತುಗೊಂಡ ಪೊಲೀಸ್ ಅಧಿಕಾರಿ. ಇಡಪನೂರು ಪಿಎಸ್ ಅವರು ಠಾಣೆಯಲ್ಲಿ ಸರಿಯಾಗಿ ಹಾಜರಾಗದಿರುವುದು, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿರುವುದು ಹಾಗೂ ಅಪಘಾತ ನಡೆದ ವೇಳೆ ಸ್ಥಳ ಪರಿಶೀಲನೆಯ ವಿಳಂಬ ಧೋರಣೆಹೀಗೆ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಎಸ್ ಪಿ ಎಂ.ಪುಟ್ಟಮಾದಯ್ಯ ಪ್ರತಿಕ್ರಿಯಿಸಿದ್ದಾರೆ.