ರಾಯಚೂರು | ಪಂಚಮಸಾಲಿ ಸಮುದಾಯದ ಹೋರಾಟ ಸಂವಿಧಾನದ ಆಶಯಕ್ಕೆ ವಿರೋಧ : ಕುಂ.ವೀರಭದ್ರಪ್ಪ
ರಾಯಚೂರು : ಬಲಿಷ್ಟ ಸಮಾಜದಲ್ಲಿ ಒಂದಾದ ಪಂಚಮಸಾಲಿ ಸಮುದಾಯ ಮೀಸಲಾತಿಯ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಶೋಷಿತ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕೇ ಹೊರತು, ಬಲಿಷ್ಟ ಸಮೂದಾಯಗಳಿಗೆ ಅಲ್ಲ. ಆದರೆ ಪಂಚಮಸಾಲಿ ಸ್ವಾಮೀಜಿ ಹಿಂಸಾತ್ಮಕ ಹೋರಾಟ ಮಾಡಿ ಪ್ರಚೋದಿಸಬಾರದು. ಕ್ರಾಂತಿಕಾರಿ ಬಸವಣ್ಣ ಸ್ಥಳ ಕೂಡಲ ಸಂಗಮ ಸ್ವಾಮೀಜಿ ಎಂದು ಸಹ ಅವರು ಕರೆದುಕೊಳ್ಳಬಾರದು. ಪಂಚಮಸಾಲಿ ಸ್ವಾಮೀಜಿ ರಾಜಕಾರಣಿಯತೆ ಸಮುದಾಯದ ನಾಯಕತ್ವ ವಹಿಸಿಕೊಳ್ಳಲು ಹೊರಟಿದ್ದಾರೆ ಎಂದು ಶುಕ್ರವಾರ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ನಮ್ಮ ದೇಶದಲ್ಲಿ ಒಂದು ಚುನಾವಣೆ, ಒಂದು ಭಾಷೆ ಪರಿಕಲ್ಪನೆ ತಪ್ಪು. ದ್ರಾವಿಡ ಸಂಸ್ಕೃತಿಯಲ್ಲಿ ಅನೇಕ ಬಾಷಿಕರು, ಕಲೆ ಸಂಸ್ಕ್ರತಿಯಿದೆ. ಹಿಂದಿ ಭಾಷೆ ಹೇರುವದರಿಂದ ಪ್ರಾದೇಶಿಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ. ಅದೇ ರೀತಿ ದೇಶದಾದ್ಯಂತ ಚುನಾವಣೆಯೂ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳ ಧ್ವನಿ ಕಳೆದುಕೊಳ್ಳುತ್ತವೆ, ಚುನಾವಣಾ ನ್ಯೂನತೆಗಳು ಹೆಚ್ಚಳವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.