ರಾಯಚೂರು: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಯುವತಿ ಮೃತ್ಯು
Update: 2024-12-12 04:39 GMT
ರಾಯಚೂರು: ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ವೇಳೆ ಬಿದ್ದು ಗಾಯಗೊಂಡು ಕೋಮಾವಸ್ಥೆಯಲ್ಲಿದ್ದ ಯುವತಿ ಬುಧವಾರ ಸಾವನಪ್ಪಿರುವ ಘಟನೆ ನಗರದಲ್ಲಿ ಜರುಗಿದೆ.
ಸ್ಥಳೀಯ ನಗರದ ವಾರ್ಡ್ ನಂ 23 ಮಡ್ಡಿಪೇಟೆ ಬಡಾವಣೆಯ ನಿವಾಸಿ ಮಹಾದೇವಿ ಮುನಿಯಪ್ಪ (20) ಮೃತ ಯುವತಿ. ಡಿ.7 ರಂದು ಬೆಳಗ್ಗೆ ಮನೆಯ ಮುಂದೆ ನಿಂತಿರುವ ವೇಳೆ ಜಗಳವಾಡುತ್ತಾ ಬಂದ ಬೀದಿ ನಾಯಿಗಳ ದಂಡು ಯುವತಿಯ ಮೇಲೆ ದಾಳಿ ಮಾಡಿತ್ತು. ಇದರಿಂದ ಗಾಯಗೊಂಡಿದ್ದ ಯುವತಿಯನ್ನು ರಿಮ್ಸ್ ಹಾಗೂ ಬಳ್ಳಾರಿಯ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.
ಬಳ್ಳಾರಿಯ ವೈದ್ಯರು ಬೆಂಗಳೂರಿಗೆ ಹೋಗುವಂತೆ ಸೂಚಿಸಿದ್ದರು. ಆದರೆ ವೈದ್ಯರಿಂದ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗದ ಕಾರಣ ಬಡ ಪಾಲಕರು ಹೆಚ್ಚಿನ ಖರ್ಚು ಮಾಡಲಾಗದೇ ಮರಳಿ ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ.