ರಾಯಚೂರು | ವಿವಿಧ ಗ್ರಾಮ ಪಂಚಾಯತ್ ಗಳಿಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರ ಭೇಟಿ : ಕಾಮಗಾರಿ ಪರಿಶೀಲನೆ

Update: 2024-12-07 11:21 GMT

ರಾಯಚೂರು : ಇಲ್ಲಿನ ವಿವಿಧ ಗ್ರಾಮ ಪಂಚಾಯತ್ ಗಳಿಗೆ ಜಿ.ಪಂ ಯೋಜನಾ ನಿರ್ದೇಶಕರಾದ ಶರಣಬಸರಾಜ ಕೆಸರಟ್ಟಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಜನಗೇರಾ ಗ್ರಾಮ ಪಂಚಾಯತ್ ಗೆ ತೆರಳಿ ಪಿಡಿಓಗಳಿಗೆ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಸೂಕ್ತ ಮಾರ್ಗದರ್ಶನ ನೀಡಿದರು. ಜಂಬಲದಿನ್ನಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ವಿಶೇಷ ಚೇತನರಿಗೆ ನರೇಗಾ ಯೋಜನೆ ಅಡಿಯಲ್ಲಿ ನರ್ಸರಿ ಪ್ಲಾಂಟೇಶನ್ ಕಾಮಗಾರಿ ನೀಡುವ ಸಂಬಂಧ ಸ್ಥಳ ಪರಿಶೀಲಿಸಿದರು.

ಗೋಬರಧನ ಘಟಕ, ಗೋಶಾಲೆ ಹಾಗೂ ಕೂಸಿನ ಮನೆ ಕೇಂದ್ರವನ್ನು ವೀಕ್ಷಿಸಿದರು. ಗಡಿಗೆ ತಯಾರು ಮಾಡುವ ವಿಧಾನವನ್ನು ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಎಲ್.ಕೆ. ದೊಡ್ಡಿ ಗ್ರಾ.ಪಂ ಯಲ್ಲಿರುವ ಸಂಜೀವಿನಿ ಶೆಡ್ ಕಾಮಗಾರಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕ ಶಿವಪ್ಪ, ಪಿಡಿಒ ಲಕ್ಷ್ಮೀ, ಮುಹಮ್ಮದ್ ಜಹೀರ್, ಬಿ.ಎಪ್.ಟಿ. ಜಿಕೆಎಮ್ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News