ರಾಜ್ಯ ಸರ್ಕಾರ ಪ್ರಜ್ವಲ್‌ ರೇವಣ್ಣ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಬೇಕಿತ್ತು : ಅಣ್ಣಾಮಲೈ

Update: 2024-05-04 06:55 GMT

ರಾಯಚೂರು : ರಾಜ್ಯ ಸರ್ಕಾರವು ಪ್ರಜ್ವಲ್‌ ರೇವಣ್ಣ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಬೇಕಿತ್ತು. ಹಾಸನದಿಂದ ಬೆಂಗಳೂರು ಹೋಗುವಾಗಲೇ ಚೆಕ್ ಪೋಸ್ಟ್ ಹಾಕಿ ಅವರನ್ನು ಹಿಡಿಯಬಹುದಿತ್ತು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಇಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರ್ಕಾರ ದಾಖಲೆಯ ವೇಗದಲ್ಲಿ ತನಿಖೆ ಮಾಡಿ ತೋರಿಸಲಿ. ಪ್ರಜ್ವಲ್ ರನ್ನು ಈಗಾಗಲೇ ದೇವೆಗೌಡ ಅವರು ಪಕ್ಷದಿಂದ ಅಮಾನತು ಮಾಡಿದ್ದಾರೆ. ರಾಜಕೀಯದಲ್ಲಿ ಏನು ಆಗಬಾರದಿತ್ತು ಅದು ಆಗಿ ಹೋಗಿದೆ. ಯಾರಿಗೂ ಕೂಡ ಹೀಗೆ ಆಗಬಾರದಿತ್ತು. ಪ್ರಕರಣವು ಬಹಳ ಗಂಭಿರವಾಗಿ ತನಿಖೆಯಾಗಲಿ. ಯಾರೇ ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದರು.

ಜೆಡಿಎಸ್ ಮತ್ತು ಬಿಜೆಪಿ ಬೇರೆ ಬೇರೆ ಪಕ್ಷ. ಇಬ್ಬರೂ ಒಂದೇ ಪಕ್ಷವಾಗಿದ್ದರೆ ವಿಲೀನ ಮಾಡಬಹುದಿತ್ತು. ಈ ಎರಡು ಬೇರೆ  ಬೇರೆ ಪಕ್ಷಗಳು ಒಂದಾಗಿರುವ ಕಾರಣ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದು ಎಂದು ನುಡಿದರು.

ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್  ಮೈತ್ರಿಯಲ್ಲಿದ್ದರು. ಆಗ ಏನು ಮಾತನಾಡಲಿಲ್ಲ. ಈಗ ನೋಡಿದರೆ ಉಲ್ಟಾ ಮಾತನಾಡುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೂ ಕೇಂದ್ರ ಸರಕಾರಕ್ಕೂ ಇದಕ್ಕೂ ಏನು ಸಂಬಂಧ?. ದೇಶದ ಎಲ್ಲ ಸಂಸತ್ ಸದಸ್ಯರಿಗೆ ಡಿಪ್ಲೋಮೇಟಿಕ್ ಪಾಸ್ ಇದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News