ಕುಂಬಾರ ನಿಗಮ ಸ್ಥಾಪನೆಗೆ ಎಮ್ ವೈ ಪಾಟೀಲ್ ನೇತೃತ್ವದಲ್ಲಿ ಸಿಎಂಗೆ ಮನವಿ

Update: 2024-10-25 02:43 GMT

ಬೆಂಗಳೂರು/ಕಲಬುರಗಿ: ಬೆಂಗಳೂರ ನಗರದ ಕಾವೇರಿ ಗೆಸ್ಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಫಜಲಪುರ ಕ್ಷೇತ್ರದ ಶಾಸಕ ಎಮ್. ವೈ ಪಾಟೀಲ್ ಮತ್ತು ಹೆಚ್ ಕೆ ಇ ಸಂಸ್ಥೆಯ ನಿರ್ದೇಶಕ ಅರುಣ್ ಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ಕುಂಬಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ, ಕೂಡಲೇ ನಿಗಮದ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡಬೇಕೆಂದು ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಕುಂಬಾರ ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಲಯದಲ್ಲಿ ತೀರಾ ಹಿಂದುಳಿದಿದೆ. ಹಾಗಾಗಿ ಈ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರದಿಂದ ನಿಗಮ ಮಂಡಳಿ ಸ್ಥಾಪಿಸಿ, ಅದಕ್ಕೆ ವಿಶೇಷ ಅನುದಾನ ಘೋಷಿಸಬೇಕೆಂದು ನಿಯೋಗದಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕುಂಬಾರ ಗುಂಡಯ್ಯನ ಪೀಠದ ಚಿತ್ರದುರ್ಗ ಶ್ರೀಗಳು, ರಾಜ್ಯಾಧ್ಯಕ್ಷರು ಶಂಕರ್ ಶೆಟ್ಟಿ, ಕುಂಬಾರ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ಅಫಜಲಪುರ ತಾಲೂಕಾಧ್ಯಕ್ಷ ಶರಣು ಕುಂಬಾರ, ಕಲಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಸುಭಾಷ್ ರೂಗಿ, ಶಿವಶರಣಪ್ಪ ಸುಲೇಪೇಟ, ಚಿತ್ತಾಪೂರ ತಾಲೂಕಾಧ್ಯಕ್ಷ ಪ್ರಭು ಬೆಣ್ಣೂರ, ಶಹಾಬಾದ ತಾಲೂಕಾಧ್ಯಕ್ಷ ಸದಾನಂದ ಕುಂಬಾರ, ಮುಖಂಡರಾದ ಶಂಕರನಾಗ ,ಸುಭಾಷ್ ರೂಗಿ, ರಮೇಶ ಪೂಜಾರಿ, ಭೂಪೇಂದ್ರ ಪ್ರಜಾಪತಿ, ರೇಖಾ ಕುಂಬಾರ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News