ಕಲಬುರಗಿ ಪೊಲೀಸರ ಕಾರ್ಯಾಚರಣೆ | 38 ಲಕ್ಷ ರೂ. ಮೌಲ್ಯದ 200 ಮೊಬೈಲ್‌ಗಳು ಪತ್ತೆ

Update: 2024-10-23 17:23 GMT

ಕಲಬುರಗಿ : ಕಳೆದ 6 ತಿಂಗಳಲ್ಲಿ ನಗರ ಪೊಲೀಸ್ ಆಯುಕ್ತಾಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಕಳ್ಳತನ, ಕಳೆದುಹೋದ 38 ಲಕ್ಷ ರೂ. ಮೌಲ್ಯದ 200 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಸೆನ್ ಹಾಗೂ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದರು.

ನಗರ ಪೊಲೀಸ್ ಆಯುಕ್ತಾಲಯದ ಸಭಾ ಭವನದಲ್ಲಿ ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಮರಳಿ ವಾರಸುದಾರರಿಗೆ ಹಿಂದಿರುಗಿಸಿದ ನಂತರ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ನಗರ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿಕೊಡಲಾಗಿದ್ದು, ಈವರೆಗೆ 58 ಪ್ರತಿಶತ ಮೊಬೈಲ್‌ಗಳು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.

ಈ ವರ್ಷ ಈವರೆಗೆ ಒಟ್ಟು 672 ಮೊಬೈಲ್‌ಗಳು ಪತ್ತೆಯಾಗಿದ್ದು, ಇದರಲ್ಲಿ ಈಗಾಲೇ 472 ಮೊಬೈಲ್‌ಗಳನ್ನು ಹಿಂದಿರುಗಿಸಲಾಗಿದೆ. ಇಂದು(ಬುಧವಾರ) ಪತ್ತೆಹಚ್ಚಿದ 200 ಮೊಬೈಲ್‌ಗಳನ್ನು ನಾವು ಜನರಿಗೆ ವಾಪಸ್ ಕೊಟ್ಟಿದ್ದೇವೆ ಎಂದರು.

KSP APP ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ :

ಹಲವು ಕಾರಣಗಳಿಂದಾಗಿ ಮೊಬೈಲ್, ಲ್ಯಾಪ್‌ಟಾಪ್ ಕಳೆದುಕೊಂಡಲ್ಲಿ ಕೂಡಲೇ KSP APP ಅನ್ನು ಸಾರ್ವಜನಿಕರು ತಮ್ಮ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ನಿಮಗೆ ಬೇಕಾದ ಪ್ರತಿಯೊಂದು ಮಾಹಿತಿಯ ವಿವರ ಇದ್ದು, ಅದರಲ್ಲಿ E-LOST, ಎಂಬ ಅಪ್ಶನ್ ಇದ್ದು ಅದರಲ್ಲಿ ಸಾರ್ವಜನಿಕರು ತಮ್ಮ ಕಳೆದು ಹೋದ ಸ್ವತ್ತಿನ ವಿವರವನ್ನು ದಾಖಲಿಸಿ, ದೂರು ನೀಡಬಹುದು. ಹೀಗೆ ಮಾಡುವುದರಿಂದ ನಿಮ್ಮ ನಂಬರ್ ತಕ್ಷಣವೇ ಬ್ಲಾಕ್ ಆಗುತ್ತದೆ ಹಾಗೂ ಅದನ್ನು ಎಲ್ಲಿ ಉಪಯೋಗಿಸಲಾಗುತ್ತದೆ ಎಂಬುದನ್ನು ಹಚ್ಚಬಹುದಾಗಿದೆ. ಹೀಗಾಗಿ ಸಾರ್ವಜನಿಕರು ಜಾಗೃತರಾಗಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಕನೀಕಾ ಸಿಕ್ರೆವಾಲ್, ಪ್ರವೀಣ ನಾಯಕ, ಎಸಿಪಿ ಡಿ.ಜಿ ರಾಜಣ್ಣ, ಸಂತೋಷ ಬನ್ನಹಟ್ಟಿ, ಸುದಾ ಆದಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.

 

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News