ಕಲಬುರಗಿ | ಜಯದೇವ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ : ತ್ವರಿತಗತಿಯಲ್ಲಿ ಅಂತಿಮ ಹಂತದ ಕೆಲಸ‌ ಮುಗಿಸಲು ಸೂಚನೆ

Update: 2024-10-23 07:12 GMT

ಕಲಬುರಗಿ : ಕಲಬುರಗಿ ನಗರದ ಹೃದಯ ಭಾಗದಲ್ಲಿ ಕೆ.ಕೆ.ಆರ್.ಡಿ.ಬಿ.ಯ ಸುಮಾರು 222 ಕೋಟಿ ರೂ. ಅನುದಾನದಿಂದ‌ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಆಸ್ಪತ್ರೆಗೆ ಮಂಗಳವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು.

ರಾಜ್ಯದ ಮುಖ್ಯಮಂತ್ರಿಗಳಿಂದ ಈ ಐತಿಹಾಸಿಕ 371 ಹಾಸಿಗೆಯ ಆಸ್ಪತ್ರೆ ಲೋಕಾರ್ಪಣೆ ಮಾಡಲು ನಿರ್ಧರಿಸಿದ್ದು, ಕೂಡಲೇ ಅಂತಿಮ‌ ಹಂತದ‌ ಕೆಲಸ ಕಾರ್ಯಗಳನ್ನು ಮುಗಿಸುವಂತೆ ಸಂಸ್ಥೆಯ ಇಂಜಿನೀಯರ್ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಕಟ್ಟಡದ ನೀಲ ನಕ್ಷೆ ವೀಕ್ಷಿಸಿದ ನಂತರ ಆಸ್ಪತ್ರೆ ಒಳ ಆವರಣ, ಅಡಿಟೋರಿಯಂ ಹಾಗೂ ಇತರೆ ವಿಭಾಗಗಳನ್ನು ಸುತ್ತಾಡಿ ಪರಿಶೀಲಿಸಿದ ಅವರು, ಇದುವರೆಗಿನ ಪ್ರಗತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಡಿ.ಎಚ್.ಓ ಡಾ.ಶರಣಬಸಪ್ಪ‌ ಕ್ಯಾತನಾಳ, ಜಯದೇವ ಆಸ್ಪತ್ರೆಯ ಇಂಜಿನಿಯರ್ ಶ್ರೀಪಾದ ಸೇರಿ ಮತ್ತಿತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News