ಯುಪಿಎಸ್‌ಸಿ ಫಲಿತಾಂಶ | ಸಾಗರದ ವಿಕಾಸ್‌ಗೆ 288ನೇ ರ‍್ಯಾಂಕ್
Update: 2025-04-22 23:45 IST
ಸಾಗರ: ಮಂಗಳವಾರ ಪ್ರಕಟವಾದ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಸಾಗರ ತಾಲೂಕಿನ ಯುವಕನೋರ್ವ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ.
ಪಟ್ಟಣದ ಅಣಲೇಕೊಪ್ಪದ ನಿವಾಸಿ ವಿಕಾಸ್ (28) 288ನೇ ರ‍್ಯಾಂಕ್ ಪಡೆದ ಯುವಕ.
ಪ್ರಸಕ್ತ ದಿಲ್ಲಿಯ ಡಿಆರ್‌ಡಿಒನಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕಾಸ್, ಅಲ್ಲಿದ್ದುಕೊಂಡೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಸಾಗರದ ಸಂತ ಜೋಸೆಫ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಎನ್‌ಜಿಎನ್ ಪೈ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿರುವ ವಿಕಾಸ್, ಇಂಜಿನಿಯರಿಂಗ್ ವ್ಯಾಸಂಗವನ್ನು ಮೈಸೂರಿನ ಎನ್‌ಐ ಕಾಲೇಜಿನಲ್ಲಿ ಮುಗಿಸಿದ್ದರು.
ವಿಕಾಸ್ ಪಟ್ಟಣದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಜಯೇಂದ್ರ ಪಾಟೀಲ್ ಹಾಗೂ ಶಿಕ್ಷಕಿ ಮಹಾಲಕ್ಷ್ಮೀ ಹೆಗಡೆ ದಂಪತಿ ಪುತ್ರ.