ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣ ಇದೆ, ಹಿಂದುತ್ವ ಪರ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ: ಕೆ. ಎಸ್. ಈಶ್ವರಪ್ಪ

Update: 2024-04-04 11:49 GMT

ಶಿವಮೊಗ್ಗ: ವಾಪಾಸ್ಸು ಹೋಗು, ನಾಮಪತ್ರ ಸಲ್ಲಿಸಿ ಗೆದ್ದು ಬಾ ಎಂದು ಉಕ್ಕಿನ ಮನುಷ್ಯ ಅಮಿತ್ ಶಾ ಸಂದೇಶ ನೀಡಿದ್ದಾರೆ. ಹಾಗಾಗಿ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಮಿತ್‌ ಶಾ ಭೇಟಿಯಾಗದೇ ದಿಲ್ಲಿಯಿಂದ ವಾಪಾಸಾದ ಬಳಿಕ ಬಂಡಾಯ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ದೆಹಲಿಗೆ ಬರಲು ಹೇಳಿದ್ದರು. ಅಷ್ಟು ದೊಡ್ಡವರು ಕರೆದಾಗ ಗೌರವ ಕೊಟ್ಟು ದೆಹಲಿಗೆ ಹೋದೆ. ರಾಜೇಶ್ ಜಿ ಅವರ ಮನೆಗೆ ತೆರಳಲು ನನಗೆ ಸೂಚಿಸಿದ್ದರು. ನಾನು ದೆಹಲಿ ತಲುಪಿ ಅಮಿತ್ ಶಾ ಅವರ ಮನೆಗೆ ಫೋನ್ ಮಾಡಿದೆ. ಆದರೆ ಫೋನ್ ಮೂಲಕ ಭೇಟಿ ಅವಶ್ಯಕತೆ ಇಲ್ಲ, ವಾಪಸು ಮನೆಗೆ ಹೋಗಲು ತಿಳಿಸಿದರು. ಈ ಮೂಲಕ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿ ಗೆಲ್ಲಲು ಎಂದು ಸೂಚನೆ ಸಿಕ್ಕಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಕುಟುಂಬ ರಾಜಕಾರಣ ಕಾಂಗ್ರೆಸ್ ತರಹ ಕರ್ನಾಟಕದ ಬಿಜೆಪಿ ಪಕ್ಷದಲ್ಲಿದೆ ಮತ್ತು ಹಿಂದುತ್ವ ಪರವಾದ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ನನ್ನ ಹಾಗೆ ಅನೇಕರಿಗೆ ಅನ್ಯಾಯವಾಗಿದೆ. ಈ ಎಲ್ಲಾ ಪ್ರಶ್ನೆ ಗಳಿಗೆ ಅವರ ಬಳಿ ಉತ್ತರ ಇಲ್ಲ ಹಾಗಾಗಿ ಭೇಟಿಯಾಗದೆ ಸ್ಪರ್ಧೆ ಮಾಡಲು ಸೂಚನೆ ಸಿಕ್ಕಂತಾಗಿದೆ. ನಾನು ಸ್ಪರ್ಧೆ ಮಾಡಿ ಗೆದ್ದು ದಿಲ್ಲಿಗೆ ತೆರಳಿ ಮೋದಿ ಪರವಾಗಿ ಕೈಎತ್ತುತ್ತೇನೆ ಎಂದರು.

ನನ್ನನ್ನು ಭೇಟಿಯಾಗದೆ ಅವರು ತೆಗೆದುಕೊಂಡ ತೀರ್ಮಾನ ಸ್ವಾಗತಿಸುತ್ತೇನೆ. ಈ ಮೂಲಕ ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲ್ಲುವ ಸೂಚನೆ ಸಿಕ್ಕಂತಾಗಿದೆ. ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿಜಯೇಂದ್ರ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಗೊಂದಲ ಸೃಷ್ಠಿಸುವ ಹೇಳಿಕೆ ನೀಡಿದರೆ ವಿಜಯೇಂದ್ರಗೆ ಬೇರೆಯದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಕಿಡಿಕಾರಿದರು.

ನಾನು ಗೀತಾ ಶಿವರಾಜ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಿಲ್ಲ. ಅವರು ನನ್ನ ಸಹೋದರಿ ಇದ್ದಂತೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ ಮಾಡಲಿಲ್ಲವೇ ಎಂದು ಮಧು ಬಂಗಾರಪ್ಪ ಮನಸ್ಸು ಮುಟ್ಟಿಕೊಂಡು ಹೇಳಲಿ ಎಂದರು.

ಮೋದಿ ಫೋಟೋ ಬಳಕೆ ಬಗ್ಗೆ ಬಿ.ವೈ.ಆರ್. ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಆಕ್ರೋಶವಾಗಿ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ಮೋದಿ ಅರವಪ್ಪನ ಮನೆ ಆಸ್ತಿ ಅಲ್ಲ, ನನ್ನ ಹೃದಯದಲ್ಲಿ ಮೋದಿ ಇದ್ದಾರೆ. ಆದರೆ ಅಪ್ಪ ಮಕ್ಕಳ ಹೃದಯದಲ್ಲಿ ಯಾರಿದ್ದಾರೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ನಾನು ಅದನ್ನು ಮತ್ತೊಮ್ಮೆ ಪುನರುಚ್ಚರಿಸಲು ಇಚ್ಛಿಸುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಕಾಂಚಿನಕಟ್ಟೆ ಸತ್ಯನಾರಾಯಣ, ಸುವರ್ಣ ಶಂಕರ್, ಆರತಿ ಅ.ಮಾ.ಪ್ರಕಾಶ್, ಮಹಾಲಿಂಗಶಾಸ್ತ್ರಿ, ಭೂಪಾಲ್, ಶ್ರೀಪಾಲ್, ಲಕ್ಷ್ಮೀಶಂಕರನಾಯಕ, ಜಾಧವ್, ಅನಿತಾ, ಸತೀಶ್, ಉಮಾಮೂರ್ತಿ, ರೇಖಾ, ಲಕ್ಷ್ಮೀ ದೇವಿ, ರಾಧರಾಮಚಂದ್ರ, ಚಿದಾನಂದ್, ಮಹೇಶ್,ಪ್ರಕಾಶ್ ಸೇರಿದಂತೆ ಹಲವರಿದ್ದರ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News