ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

Update: 2024-10-01 04:52 GMT

ಫೋಟೋ : ANI

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಒಂದು ತಿಂಗಳು ಲೈಸೆನ್ಸ್ ವಿಸ್ತರಣೆಯಾಗಿರುವ ಬೆನ್ನಲ್ಲೆ ಡಿಜಿಸಿಎ(The Director General Civil Aviation ) ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ 20 ಲಕ್ಷ ರೂ.ದಂಡ ವಿಧಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಏರೋಡ್ರೋಮ್ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಿಮಾನ ನಿಲ್ದಾಣದ ನಿರ್ವಾಹಕರಾಗಿರುವ ಕೆಎಸ್ಐಐಡಿಸಿ(Karnataka State Industrial Infrastructure Development Corporation) ಶಿವಮೊಗ್ಗ ಇದಕ್ಕೆ ಡಿಜಿಸಿಎ 20 ಲಕ್ಷ ರೂ. ದಂಡ ವಿಧಿಸಿದೆ.

ಡಿಜಿಸಿಎ ಕಳೆದ ಜುಲೈನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಪರಿಶೀಲನೆಗೆ ಆಗಮಿಸಿದ್ದು, ತಪಾಸಣೆಯ ಕುರಿತಾಗಿ ಆಗಸ್ಟ್ನಲ್ಲಿ ಕೆಎಸ್ಐಐಡಿಸಿಗೆ ನೋಟಿಸ್ ನೀಡಿತ್ತು. ಪ್ರತಿಯಾಗಿ ಕೆಎಸ್ಐಐಡಿಸಿ ಡಿಜಿಸಿಎಗೆ ಉತ್ತರ ನೀಡಿತ್ತು. ಈ ಉತ್ತರಕ್ಕೆ ತೃಪ್ತರಾಗದ ಡಿಜಿಸಿಎ ಅಸುರಕ್ಷತೆಯ ಕಾರಣಗಳನ್ನ ಪಟ್ಟಿ ಮಾಡಿ, ಅಂತಹ ಸನ್ನಿವೇಶದಲ್ಲಿ ವಿಮಾನಗಳ ಸಂಚಾರಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಹಾಗೂ ಸೂಕ್ತವಾದ ರೀತಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಕಾರಣ ನೀಡಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News