ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ತಾಕತ್ತಿದ್ದರೆ ವಿಜಯೇಂದ್ರ ಸರ್ಕಾರ ಬೀಳಿಸಲಿ: ಬೇಳೂರು ಗೋಪಾಲಕೃಷ್ಣ ಸವಾಲು
ಶಿವಮೊಗ್ಗ : ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ಧಮ್ಮು, ತಾಕತ್ತು ಇದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರ ಬೀಳಿಸಲಿ ನೋಡೋಣ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲು ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸ್ವಾಭಾವಿಕವಾಗಿ ಮನೆಗೆ ಔತಣಕೂಟಕ್ಕೆ ಕರೆದಿದ್ದಾರೆ ಅಂತ ಹೋಗಿದ್ದಾರೆ, ಡಿಸಿಎಂ ಹೊರ ದೇಶಕ್ಕೆ ಹೋಗಿರುವ ಹಿನ್ನಲೆ ಈ ರೀತಿಯ ಗೊಂದಲ ಸೃಷ್ಠಿ ಆಗಿದೆ. ವಿಜಯೇಂದ್ರ ಏನು ಭವಿಷ್ಯ ಹೇಳ್ತಾರಾ, ವಿಜಯೇಂದ್ರನ ಬುಡವೇ ಅಲ್ಲಾಡುತ್ತಿದೆ. ಅವರ ಪಕ್ಷದವರೇ ಅವರ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ಧಮ್ಮು, ತಾಕತ್ತು ಇದ್ರೆ ವಿಜಯೇಂದ್ರ ಸರ್ಕಾರ ಬೀಳಿಸಲಿ ನೋಡೋಣ. ವಿಜಯೇಂದ್ರನಿಗೆ ಇನ್ನು ಎಳೆ ವಯಸ್ಸು ಎಳೆ ವಯಸ್ಸಿನ ಹಿನ್ನೆಲೆ ಏನ್ ಏನೋ ಮಾತಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಇನ್ನು ಸಿ.ಟಿ.ರವಿ ದತ್ತಪೀಠದಲ್ಲಿ ದತ್ತಮಾಲೆ ಹಾಕಿಕೊಂಡು ಭಿಕ್ಷೆ ಬೇಡಿ, ಹೆಣ್ಣು ಮಕ್ಕಳಿಗೆ ಗೌರವ ಕೊಡದೇ ಮಾತನಾಡಿದ್ದಾರೆ, ಹಿಂದುತ್ವದ ಹೆಸರಿನಲ್ಲಿ ಇದೇ ಸಂಸ್ಕೃತಿ ಸಿ.ಟಿ.ರವಿ ಕಲಿತ್ತಿದ್ದ ಎಂದು ಪ್ರಶ್ನಿಸಿದರು.
ಬಿಜೆಪಿಯವರು ನಾರಿಗೆ ಗೌರವ ಕೊಡುತ್ತೇವೆ ಎನ್ನುತ್ತಾರೆ, ಇದೇನಾ ಇವರು ಕೊಡುವ ಗೌರವ ಎಂದು ಸಿ.ಟಿ.ರವಿ ವಾಗ್ದಾಳಿ ಮಾಡಿದ್ದಾರೆ. ಈಶ್ವರಪ್ಪ ಪಕ್ಷ ಸೇರಲು ಇನ್ನಿಲ್ಲದ ಕಸರತ್ತು ಮಾಡ್ತಾ ಇದ್ದಾರೆ ಹಾಗಾಗಿ ಬ್ರಿಗೇಡ್ ಚಾಲ್ತಿ ಮಾಡಿದ್ದಾರೆ ಎಂದರು.
ಸಾರಿಗೆ ಬಸ್ ದರ ಎಲ್ಲಾ ಕಡೆ ಹೆಚ್ಚಳ ಮಾಡ್ತಾರೆ. ಗ್ಯಾಸ್ ದರ ಏರಿಕೆ ಆಗಿಲ್ವ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿಲ್ವ ಎಂದು ಪ್ರಶ್ನೆ ಮಾಡಿದರು. ಕೆಎಸ್ಸಾರ್ಟಿಸಿ ಹಾಳು ಮಾಡಿದ್ದೇ ಈ ಹಿಂದಿನ ಬಿಜೆಪಿ ಸರ್ಕಾರ. ಶಕ್ತಿ ಯೋಜನೆಯಿಂದ ನಮಗೆ ಲಾಸ್ ಆಗಿಲ್ಲ, ನಾವು ಸಾಕಷ್ಟು ಹೊಸ ಬಸ್ ಖರೀದಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಅಭಿವೃದ್ದಿ ಅಲ್ವ, ಅದರಿಂದ ಜನರಿಗೆ ಅನುಕೂಲ ಆಗಿದೆ ಎಂದರು.
ಇನ್ನು ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತನಾಡಿದ ಅವರು, ನಾನೂ ಆಕಾಂಕ್ಷಿ, ನಾನೇನು ರಾಜಕೀಯ ಸನ್ಯಾಸಿ ಅಲ್ಲ. ಆ ಸಂದರ್ಭ ಬಂದಾಗ ಕೇಳುತ್ತೇನೆ. ಕೊಡುವುದು ಬಿಡುವುದು ಹೈ ಕಮಾಂಡ್ ಗೆ ಬಿಟ್ಟಿದ್ದು. ಈಗ ಯಾವುದೇ ಸಂಪುಟ ಬದಲಾವಣೆ ಚೆರ್ಚೆ ಆಗಿಲ್ಲ ಎಂದರು.
ಮಲೆನಾಡಿನ ಹಿರಿಯ ಸಾಹಿತಿ ಡಾ. ನಾ.ಡಿಸೋಜ ನಿಧನಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಂತಾಪ ಸೂಚಿಸಿದ್ದಾರೆ. ಹೆಮ್ಮೆಯ ಸಾಹಿತಿಗಳು ನಿಧನದ ವಿಷಯ ಕೇಳಿ ಬಹಳ ಬೇಸರ ಆಯಿತು. ಅತ್ಯಂತ ಯಶಸ್ವಿಯಾಗಿ ಸಾಹಿತಿ ಕ್ಷೇತ್ರಕ್ಕೆ ಕೊಡುಗೆ ಕೊಟ್ಟವರು ನಾ.ಡಿಸೋಜ ಅವರು, ಡಿಸೋಜ ಅವರು 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು, ರಾಜ್ಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದರು. ಅವರ ನಿಧನ ಬಹಳ ನೋವು ತಂದಿದೆ ಎಂದರು.