ಪರಿಷತ್‌ ಚುನಾವಣೆ | ನೈರುತ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿಯ ಧನಂಜಯ ಸರ್ಜಿ ಗೆಲುವು

Update: 2024-06-07 11:39 GMT

ಶಿವಮೊಗ್ಗ : ನೈರುತ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧನಂಜಯ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಗುರುವಾರ ಮಧ್ಯಾಹ್ನದ ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು ಐದು ಸುತ್ತುಗಳ ಮತ ಎಣಿಕೆ ನಂತರ ಚಲಾವಣೆ ಯಾದ ಮತಗಳಲ್ಲಿ ಶೇ.50ಕ್ಕೂ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ಮತ ಎಣಿಕೆ ಮುಕ್ತಾಯಗೊಂಡಿದ್ದು, ಡಾ.ಧನಂಜಯ ಸರ್ಜಿ ಅವರು ಚಲಾವಣೆಯಾದ 57,980 ಮತಗಳಲ್ಲಿ 35,434 ಪ್ರಥಮ ಪ್ರಾಶಸ್ತ್ಯ ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದರು. ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ 12,672 ಪ್ರಥಮ ಪ್ರಾಶಸ್ತ್ಯದ ಮತಗಳು ದೊರೆತರೆ, ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಅವರಿಗೆ 6,853 ಹಾಗೂ ಎಸ್.ಪಿ. ದಿನೇಶ್ ಅವರಿಗೆ 2,384 ಮತಗಳು ಲಭಿಸಿದವು.

ಚಲಾವಣೆಯಾದ 62,750 ಮತಗಳಲ್ಲಿ 4,770 ಮತಗಳು ತಿರಸ್ಕೃತ(ಇನ್‌ವ್ಯಾಲಿಡ್) ಆದವು. ಮೈಸೂರಿನಲ್ಲಿ ಮತ ಎಣಿಕೆ ನಂತರ ಡಾ.ಧನಂಜಯ ಸರ್ಜಿ ಅವರು ಮತ ಎಣಿಕೆ ಕೇಂದ್ರದಿಂದ ಹೊರಬರುತ್ತಿದ್ದಂತೆ ಬಿಜೆಪಿ ಮುಖಂಡರು ಅವರನ್ನು ಅಭಿನಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News