ಪ್ರಜ್ವಲ್ ಪ್ರಕರಣ | ಒಂದು ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಯುತ್ತಿದೆ : ಆರಗ ಜ್ಞಾನೇಂದ್ರ

Update: 2024-05-08 09:59 GMT

ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು ಒಂದು ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ಆ ಸುಮದಾಯ ಒಪ್ಪಲ್ಲ. ಪೆನ್ ಡ್ರೈವ್ ಹೊರಗಡೆ ಬಿಟ್ಟಿದ್ದು, ಸಹ ಅಷ್ಟೇ ದೊಡ್ಡ ತಪ್ಪು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅಪರಾಧ ಮಾಡಿದವರನ್ನು ದಂಡಿಸಬೇಕು. ಈ ಪ್ರಕರಣವನ್ನು ಎಸ್ಐಟಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ವಿತರಣೆ ಮಾಡಿದವರು ಕೂಡ ಅಷ್ಟೇ ದೊಡ್ಡ ಅಪರಾಧಿಗಳು ಎಂದು ಹೇಳಿದರು.

ಪೆನ್ ಡ್ರೈವ್ ಹಂಚಿದವರನ್ನು ಸರ್ಕಾರ ಗಮನಿಸುತ್ತಿಲ್ಲ. ಇಂತಹ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದು ನಾಚೀಗೇಡು, ಹೇಸಿಗೆಯ ರಾಜಕೀಯ. ಡಿಸಿಎಂ ಡಿಕೆಶಿ ಅವರ ಎರಡ್ಮೂರು ಪ್ರಕರಣ ಆಗಿದೆ. ದೇವೇಗೌಡರಿಗೆ ನೋವುಂಟು ಮಾಡಬೇಕು ಎನ್ನುವುದು ಇದರ ಹಿಂದೆ ಇದೆ, ಒಕ್ಕಲಿಗ ನಾಯಕತ್ವದ ಪ್ರಶ್ನೆ ಈ ಪ್ರಕರಣದ ಹಿಂದೆ ಇದೆ ಎಂದು ಹೇಳಿದರು.

ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ.ಎಸ್ಐಟಿ ಒತ್ತಡದಲ್ಲಿ ತನಿಖೆ ಮಾಡುತ್ತಿದೆ. ಸಿಎಂ,ಡಿಸಿಎಂ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯುತ್ತಿದೆ. ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ ನಡೆಯುತ್ತಿದೆ. ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇದ್ದಾರೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News