ಸಾಗರ: ಆರೋಗ್ಯ ಇಲಾಖೆ ಸಿಬ್ಬಂದಿ ಡೆಂಗ್ಯೂಗೆ ಬಲಿ
Update: 2024-06-13 07:16 GMT
ಶಿವಮೊಗ್ಗ: ಅರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಡೆಂಗ್ಯೂಗೆ ಬಲಿಯಾದ ಘಟನೆ ಸಾಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸಾಗರ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿ ನಾಗರಾಜ್(35) ಮೃತಪಟ್ಟವರು. ಕಳೆದ ಕೆಲ ದಿನಗಳಿಂದ ಡೆಂಗ್ಯೂನಿಂದ ಬಳಲುತ್ತಿದ್ದ ಇವರು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಗರ್ ನಿಂದಲೂ ಬಳಲುತ್ತಿದ್ದ ನಾಗರಾಜ್, ಇಂದು ಚಿಕಿತ್ಸೆ ಫಲಿಸದೇ ಡೆಂಗ್ಯೂಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಾಜ್ ಡೆಂಗ್ಯೂನಿಂದ ಮೃತಪಟ್ಟಿರುವುದನ್ನು ಸಾಗರ ತಾಲೂಕು ವೈದ್ಯಾಧಿಕಾರಿ ಡಾ.ಪರಪ್ಪ ದೃಢಪಡಿಸಿದ್ದಾರೆ. ಸಾಗರದಲ್ಲಿ ಡೆಂಗ್ಯೂಗೆ ಇದು ಮೊದಲ ಬಲಿಯಾಗಿದೆ.