ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ; ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ಹಲವರು ಪೊಲೀಸ್ ವಶಕ್ಕೆ

Update: 2024-08-08 08:29 GMT

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ ನಡೆಸಿರುವ ಬಗ್ಗೆ ವರದಿಯಾಗಿದೆ.

ಬಿ.ವೈ. ವಿಜಯೇಂದ್ರ ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದು, ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಿತೂರಿ ನಡೆಸುತ್ತಿದ್ದಾರೆಂದು ಆರೋಪಿಸಿ ನಗರದ ಬೈಪಾಸ್ ರಸ್ತೆಯಲ್ಲಿರುವ ವಿಜಯೇಂದ್ರ ನಿವಾಸಕ್ಕೆ  ಮುತ್ತಿಗೆ ಹಾಕಲು ಯತ್ನಿಸಲಾಗಿದೆ.

ವಿಜಯೇಂದ್ರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು ಪ್ರತಿಭಟನಾಕಾರರನ್ನು ಮನೆ ಬಳಿ ಬಿಡದ ಪೊಲೀಸರು ದಾರಿ ಮಧ್ಯದಲ್ಲೇ ವಶಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರುಗಳಾದ ಕೆ ರಂಗನಾಥ್ , ಡಾ.ಎಸ್.ಎಂ ಶರತ್ ಮರಿಯಪ್ಪ, ಎಂ ಪ್ರವೀಣ್ ಕುಮಾರ್, ವಿಜಯ್ ಕುಮಾರ್ ದನಿ, ಶಿವಣ್ಣ, ಹೆಚ್ ಪಾಲಾಕ್ಷಿ, ಕಟ್ಟ ಉಮೇಶ್,ಮಂಜುನಾಥ್ ನವುಲೆ , ಎಚ್‌ಪಿ ಗಿರೀಶ್ ಬಸವರಾಜ್ , ವಿನೋದ್, ಗುರುಪ್ರಸಾದ್ , ಎಸ್ ಕುಮಾರೇಶ್ , ರಾಹುಲ್ , ರಾಜೇಶ್ ಮಂದಾರ ,ಕೇಶವ, ಕೆ ಎಲ್ ಪವನ್ , ಶಿವಕುಮಾರ್ ,ನದೀಮ್ ಇರ್ಫಾನ್ , ಸಾಹಿಲ್ , ಸುರೇಶ್ ಹಾಗೂ ಶೋಷಿತ ವರ್ಗಗಳ ಸಮಾಜದ ಮುಖಂಡರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News