ಶಿವಮೊಗ್ಗ: ಚಿನ್ನಾಭರಣ ಕಳವು ಪ್ರಕರಣ; ಐವರು ಮಹಿಳೆಯರ ಬಂಧನ

Update: 2024-07-15 04:13 GMT

ಶಿವಮೊಗ್ಗ: ಕೆಎಸ್ಸಾರ್ಟಿಸಿ ಬಸ್‌ ನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಬಂಗಾರದ ಆಭರಣ ಕಳ್ಳತನ ಪ್ರಕರಣ ಸಂಬಂಧ  ಐವರು ಮಹಿಳೆಯರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಭದ್ರಾವತಿಯ ಹೊಸಮನೆಯ ಶಾಂತಿ ಅಲಿಯಾಸ್‌ ಕರ್ಕಿ (31), ಹನುಮಂತ ನಗರದ ಮೀನಾಕ್ಷಿ (38), ಸಾವಿತ್ರಿ ಅಲಿಯಾಸ್‌ ಬಾಬಾ (29), ಭೋವಿ ಕಾಲೋನಿಯ ದುರ್ಗಾ ಅಲಿಯಾಸ್‌ ಸಣ್ಣ ದುರ್ಗಾ (29), ಸುಶೀಲಮ್ಮ (66) ಎಂದು ಗುರುತಿಸಲಾಗಿದೆ.

ಜೂ.29ರಂದು ಮಹಿಳೆಯೊಬ್ಬರು ದಾವಣಗೆರೆಯಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭಕ್ಕೆ ತೆರಳಲು ಕೆಎಸ್ಸಾರ್ಟಿಸಿ ಬಸ್‌ ಹತ್ತಿದ್ದರು. ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಫೋನ್‌ ತೆಗೆದುಕೊಳ್ಳಲು ಮುಂದಾದಾಗ ಬ್ಯಾಗ್‌ ತೆರೆದುಕೊಂಡಿದ್ದು ಗಮನಕ್ಕೆ ಬಂತು. ಪರಿಶೀಲಿಸಿದಾಗ ಬ್ಯಾಗಿನಲ್ಲಿದ್ದ ಆಭರಣ ನಾಪತ್ತೆಯಾಗಿದ್ದವು. ಈ ಸಂಬಂಧ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಐವರು ಮಹಿಳೆಯರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿನ ಒಟ್ಟು 7 ಕಳ್ಳತನ ಪ್ರಕರಣಗಳ ಕುರಿತು ಬಾಯಿ ಬಿಟ್ಟಿದ್ದಾರೆ. 8.13 ಲಕ್ಷ ರೂ.ಮೌಲ್ಯದ 122 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌ ರವಿ ಪಾಟೀಲ್‌ ನೇತೃತ್ವದಲ್ಲಿ ಎಎಸ್‌ಐ ನಾಗರಾಜ್‌, ಸಿಬ್ಬಂದಿ ಪಾಲಾಕ್ಷ ನಾಯ್ಕ, ಲಚ್ಚಾ ನಾಯ್ಕ್, ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನಿತ್‌ ರಾವ್‌, ಪ್ರಕಾಶ್‌, ದೀಪಾ ಎಸ್.ಹುಬ್ಬಳ್ಳಿ, ಪೂಜಾ, ಸುಮಿತ್ರಾ ಬಾಯಿ, ಲಕ್ಷ್ಮಿ  ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News