ಶಿವಮೊಗ್ಗ: ಬೀಡಿ, ಸಿಗರೇಟು ನೀಡುವಂತೆ ಆಗ್ರಹಿಸಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪ್ರತಿಭಟನೆ

Update: 2024-09-02 07:38 GMT

ಶಿವಮೊಗ್ಗ: ಬೀಡಿ, ಸಿಗರೇಟು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಸೋಗಾನೆ ಬಳಿ ಇರುವ ಕೇಂದ್ರ ಕಾರಗೃಹದಲ್ಲಿ ಬೀಡಿ ಸಿಗರೇಟಿಗಾಗಿ 778 ಕೈದಿಗಳು ಇಂದು ಬೆಳಗ್ಗಿನ ಉಪಹಾರವನ್ನು ಸೇವಿಸಿದೇ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಟ ದರ್ಶನ್ ಪ್ರಕರಣದ ಬಳಿಕ ಕಾರಾಗೃಹ ಇಲಾಖೆಯ ಬಿಗಿ ಕ್ರಮದಿಂದ ಜೈಲಿನಲ್ಲಿ ಬೀಡಿಯು ಸಹ ಸಿಗುತ್ತಿಲ್ಲ. ಆದರೆ ಬೀಡಿ ಸಿಗರೇಟಿನ ಚಟಕ್ಕೆ ಅಡಿಕ್ಟ್‌ ಆಗಿರುವ ಕೈದಿಗಳು ಅದರಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಪ್ರತಿಭಟನಾ ನಿರತ ಕೈದಿಗಳ ಮನವೊಲಿಸುವ ಸಲುವಾಗಿ ಕಾರಾಗೃಹ ಇಲಾಖೆಯ ಅಧಿಕಾರಿಗಳ ತಂಡ ಪ್ರಯತ್ನ ನಡೆಸುತ್ತಿದೆಯಾದರೂ ಅಧಿಕಾರಿಗಳ ಮಾತಿಗೆ ಕೈದಿಗಳು ಸುಮ್ಮನಾಗುತ್ತಿಲ್ಲ. ಬೀಡಿಯಾದರೂ ಬೇಕು ಎಂದು ಪ್ರತಿಭಟನೆ ಮುಂದುವರಿಸಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗೆಷ್ಟೆ ಎಸ್‌ಪಿ ಮಿಥುನ್‌ ಕುಮಾರ್‌ ನೇತೃತ್ವದ 100 ಕ್ಕೂ ಹೆಚ್ಚು ಪೊಲೀಸರ ತಂಡ ದಾಳಿ ನಡೆಸಿದಾಗ ಬೆಂಕಿ ಪೊಟ್ಟಣ ಹಾಗೂ ಬೀಡಿಯ ಬಂಡಲ್‌ ಮತ್ತು ಚಾರ್ಜರ್‌ ವಯರ್‌ ಸಿಕ್ಕಿತ್ತು. ಈ ಬಗ್ಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌  ಸಹ ದಾಖಲಾಗಿತ್ತು.

 ದರ್ಶನ್‌ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಆನಂತರ ಜೈಲಿನಲ್ಲಿ ಇನ್ನಷ್ಟು ಬಂದೋಬಸ್ತ್‌ ಮಾಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಕೈದಿಗಳಿಗೆ ಬೀಡಿಯೂ ಸಿಗಂದತಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಕೈದಿಗಳು ಪ್ರತಿಭಟನೆಗೆ ಇಳಿದಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News