ಸೊರಬ | ಎರಡು ಬೈಕ್ ಗಳ ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು

Update: 2024-03-23 04:53 GMT

ಶಿವಮೊಗ್ಗ, ಮಾ.23: ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಶುಕ್ರವಾರ ಸಂಜೆ ಸೊರಬದಲ್ಲಿ ನಡೆದಿದೆ.

ಸೊರಬ ತಾಲೂಕಿನ ಕಣ್ಣೂರು ಗ್ರಾಮದ ನಿವಾಸಿ ಶಿವಪ್ಪ(45) ಮೃತಪಟ್ಟ ಬೈಕ್ ಸವಾರ.

ಸೊರಬ ತಾಲೂಕಿನ ಉಳವಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಸೊರಬ-ಸಾಗರ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇನ್ನೊಂದು ಬೈಕ್ ಸವಾರ ಕೂಡಾ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News