ಯುವ ನಿಧಿ| ನಾವು ನುಡಿದಂತೆ ನಡೆದಿದ್ದೇವೆ: ಸಚಿವ ಮಧು ಬಂಗಾರಪ್ಪ

Update: 2023-12-26 17:55 GMT

ಶಿವಮೊಗ್ಗ: ನಾವು ನುಡಿದಂತೆ ನಡೆದಿದ್ದೇವೆ. ಐದನೇ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆ ನೋಂದಣಿ ಡಿ.26 ರಿಂದ ಆರಂಭವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು

ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರ ಬರಲು ಕಾರಣವಾಗಿದೆ. ಸರ್ಕಾರ ಬಂದರೆ ಗ್ಯಾರಂಟಿ ಕೊಡ್ತೇವೆ ಅಂತ ಮಾತು ಕೊಟ್ಟಿದ್ದೇವು. ಆ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.

ಯುವಕರು ಕಷ್ಟಪಟ್ಟು ಓದಿರುತ್ತಾರೆ. ಕೆಲಸ ಸಿಕ್ಕಿರಲ್ಲ. ಖರ್ಚಿಗೆ ಹಣ ಇರಲ್ಲ. ಮನೆಯಲ್ಲಿ ಹಣ ಕೇಳಲು ಆಗದ ಭಾವನೆ ಇರುತ್ತದೆ. ಯುವಕರು ದೃತಿಗೆಡುವುದು ಬೇಡ, ಡಿಪ್ಲಮೋ ಪದವೀಧರರಿಗೆ 1500, ಪದವೀಧರರಿಗೆ 3 ಸಾವಿರ ಕೊಡ್ತೇವೆ. ಯುವಕರು ನೋಂದಣಿ ಮಾಡಿಕೊಳ್ಳಬೇಕು ಎಂದರು.

ಜ.12 ರಂದು ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಯುವ ನಿಧಿ ಯೋಜನೆಯ ಕಾರ್ಯಕ್ರಮ ನಡೆಯಲಿದೆ. ಆ ದಿನ ಎಲ್ಲರ ಅಕೌಂಟ್ ಗೆ ಹಣ ಹೋಗಲಿದೆ ಎಂದರು.

ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ನನ್ನ ಇಲಾಖೆಯಲ್ಲಿ ಬಹಳ ಸಮಸ್ಯೆ ಇದೆ ಎಂದರು.

ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಬೇರೆ ಭಾವನೆ ಮೇಲೆ ಹೇಳಿರುತ್ತಾರೆ. ಅವರ ಮನಸಾರೆ ಯಾರು ಹೇಳಿರಲ್ಲ. ನಮ್ಮ ಸರಕಾರ ರೈತರ ಪರ ಇರುತ್ತದೆ.‌ ಆ ರೀತಿ ಅವರು ಹೇಳಿರೋದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News