ಗೂಗಲ್ ರೂಪಿಸಿದ ಅಪ್ಲಿಕೇಶನ್ ಗೆ 'ರೈಲ್ವೇ ಇಲಾಖೆ'ಗೆ ಭೇಷ್ ಎಂದು ಟ್ರೋಲ್ ಗೆ ಗುರಿಯಾದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2024-07-05 12:16 GMT

ಬೆಂಗಳೂರು : ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ ನಲ್ಲಿ ಹಾಕಿರುವ ಪೋಸ್ಟ್ ಒಂದು ಟ್ರೋಲ್ ಗೆ ಗುರಿಯಾಗಿದೆ. "Where is my train" ಎಂಬ ರೈಲ್ವೇ ಸೇವೆಗೆ ಸಂಬಂಧಿಸಿದ ಅಪ್ಲಿಕೇಶನ್ ಅನ್ನು ರೈಲ್ವೇ ಇಲಾಖೆ ರಚಿಸಿದೆ ಎಂಬಂತೆ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಗೂಗಲ್ ಸಂಸ್ಥೆಯ ಸೇವೆಗೆ ಕೇಂದ್ರ ಸರಕಾರದ ರೈಲ್ವೇ ಇಲಾಖೆಗೆ ಅಭಿನಂದಿಸಿದ ಸುರೇಶ್ ಕುಮಾರ್ ಅವರ ಪೋಸ್ಟ್ ವ್ಯಂಗ್ಯಕ್ಕೆ ಗುರಿಯಾಗಿದ್ದು, ವಿಶ್ವಕಪ್ ಗೆಲುವಿಗೆ ಮೋದಿ ಕಾರಣ ಎಂದವರಿಂದ ಇದೆಲ್ಲಾ ದೊಡ್ಡ ವಿಷಯವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಕಾಲೆಳೆದಿದ್ದಾರೆ.

Where is my train ಎಂಬುದು ಭಾರತೀಯ ರೈಲುಗಳ ಲೈವ್ ಸ್ಥಿತಿಯನ್ನು ಟ್ರ್ಯಾಕ್ ಮಾಡಲು Google ನಿಂದ ಅಭಿವೃದ್ಧಿಪಡಿಸಲಾದ Android ಅಪ್ಲಿಕೇಶನ್ ಆಗಿದ್ದು, ಇದನ್ನು 2015ರಲ್ಲಿ TiVo ಕಾರ್ಪೊರೇಷನ್ ಡೆವಲಪರ್‌ಗಳ ತಂಡವಾದ Sigmoid ಲ್ಯಾಬ್ಸ್ ನಿರ್ಮಿಸಿದೆ. ಈ ಕಂಪನಿಯನ್ನು 2018 ರಲ್ಲಿ ಗೂಗಲ್ ಖರೀದಿಸಿದೆ ಎಂದು ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News