ವಿಂಬಲ್ಡನ್ ಚಾಂಪಿಯನ್ ಶಿಪ್ | ಮೊದಲ ಸುತ್ತಿನಲ್ಲಿ ನಿರ್ಗಮಿಸಿ ಅನಪೇಕ್ಷಿತ ದಾಖಲೆ ನಿರ್ಮಿಸಿದ ವೊಂಡ್ರೊಸೋವಾ

Update: 2024-07-03 15:15 GMT

ಮಾರ್ಕೆಟಾ ವೊಂಡ್ರೊಸೋವಾ | PC : NDTV  

ಲಂಡನ್, ಜು.3: ಹಾಲಿ ವಿಂಬಲ್ಡನ್ ಮಹಿಳೆಯರ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೋವಾ ಸ್ಪೇನ್ನ ಜೆಸ್ಸಿಕಾ ಬೌಝಾಸ್ ಮನೇರೊ ವಿರುದ್ಧ್ದ ಸೋಲನುಭವಿಸಿ ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದರು. 30 ವರ್ಷಗಳಲ್ಲಿ ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ ಬೇಗನೆ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಈ ಮೂಲಕ ವೊಂಡ್ರೊಸೋವಾ ಅನಪೇಕ್ಷಿತ ದಾಖಲೆ ನಿರ್ಮಿಸಿದರು.

ಕಳೆದ ವರ್ಷ ಪ್ರಶಸ್ತಿ ಜಯಿಸಿದ ಶ್ರೇಯಾಂಕರಹಿತ ಆಟಗಾರ್ತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದ ಆರನೇ ಶ್ರೇಯಾಂಕದ ಝೆಕ್ ಆಟಗಾರ್ತಿ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಜೆಸ್ಸಿಕಾ ವಿರುದ್ಧ 4-6, 2-6 ಸೆಟ್ ಗಳ ಅಂತರದಿಂದ ಸೋತಿದ್ದಾರೆ.

ವೊಂಡ್ರೊಸೋವಾ ಬೇಗನೆ ನಿರ್ಗಮಿಸಿದ್ದು ಭಾರೀ ನಿರಾಸೆಯ ವಿಚಾರವಾಗಿದೆ. ಮತ್ತೊಂದೆಡೆ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ಗಾಯದ ಸಮಸ್ಯೆಯ ಕಾರಣಕ್ಕೆ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ತನ್ನ ನೆಚ್ಚಿನ ಸೆಂಟರ್ಕೋರ್ಟ್ನಲ್ಲಿ ವಿದಾಯ ಹೇಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಈ ವಾರ ತನ್ನ ಸಹೋದರ ಜಮ್ಮಿ ಮರ್ರೆ ಜೊತೆಗೆ ಡಬಲ್ಸ್ ಪಂದ್ಯವನ್ನು ಆಡಲಿರುವ ಮರ್ರೆಗೆ ತನ್ನ ಯಶಸ್ವಿ ವಿಂಬಲ್ಡನ್ ವೃತ್ತಿಜೀವನಕ್ಕೆ ಅಂತಿಮ ಸ್ಪರ್ಶ ನೀಡಲು ಈಗಲೂ ಅವಕಾಶವಿದೆ.

*ಇಗಾ ಸ್ವಿಯಾಟೆಕ್ ಶುಭಾರಂಭ

ಅಗ್ರ ಶ್ರೇಯಾಂಕದ ಆಟಗಾರ್ತಿ ಹಾಗೂ ಐದು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸುತ್ತು ತಲುಪಿದ್ದಾರೆ.

ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ಆಸ್ಟ್ರೇಲಿಯನ್ ಚಾಂಪಿಯನ್ ಸೋಫಿಯಾ ಕೆನಿನ್ರ ಕಠಿಣ ಹೋರಾಟವನ್ನು ಹಿಮ್ಮೆಟ್ಟಿಸಿದ ಪೋಲ್ಯಾಂಡ್ ಆಟಗಾರ್ತಿ 6-3, 6-4 ಸೆಟ್ ಗಳ ಅಂತರದಿಂದ ಜಯಶಾಲಿಯಾದರು.

*ಆಂಡ್ರೂ ರುಬ್ಲೇವ್ ಗೆ ಆಘಾತಕಾರಿ ಸೋಲು: ಗರಿಷ್ಠ ಶ್ರೇಯಾಂಕದ ಅಟಗಾರ ರಶ್ಯದ ಆಂಡ್ರೂ ರುಬ್ಲೇವ್ ಅರ್ಜೆಂಟೀನದ ಫ್ರಾನ್ಸಿಸ್ಕೋ ಕೊಮೆಸನ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News