ಮೊದಲ ಟಿ20: ಭಾರತಕ್ಕೆ ಆಘಾತಕಾರಿ ಸೋಲುಣಿಸಿದ ಝಿಂಬಾಬ್ವೆ

Update: 2024-07-06 14:39 GMT

Photo:X/ICC

ಹರಾರೆ: ನಾಯಕ ಸಿಕಂದರ್ ರಝಾ(3-25) ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ಝಿಂಬಾಬ್ವೆ ವಿರುದ್ಧದ ಮೊದಲ ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 13 ರನ್ ಅಂತರದಿಂದ ಸೋಲುಂಡಿದೆ. ಈ ವರ್ಷ ಆಡಿರುವ ಟಿ20 ಪಂದ್ಯದಲ್ಲಿ ಮೊದಲ ಸೋಲು ಕಂಡಿದೆ. ಈ ಮೂಲಕ ಆತಿಥೇಯ ಝಿಂಬಾಬ್ವೆ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 116 ರನ್ ಗುರಿ ಬೆನ್ನಟ್ಟಿದ ಭಾರತ ತಂಡ 19.5 ಓವರ್‌ಗಳಲ್ಲಿ 102 ರನ್ ಗಳಿಸಿ ಆಲೌಟಾಗಿದೆ.

ಭಾರತದ ಪರ ನಾಯಕ ಹಾಗೂ ಆರಂಭಿಕ ಆಟಗಾರ ಶುಭಮನ್ ಗಿಲ್(31 ರನ್, 29 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.

ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್( 27 ರನ್)ಗೆಲುವಿಗಾಗಿ ಪ್ರಯತ್ನ ನಡೆಸಿದರು.

ಝಿಂಬಾಬ್ವೆ ಪರ ಟೆಂಡೈ ಚಟರ(3-16) ಹಾಗೂ ಸಿಕಂದರ್ ರಝಾ(3-25) ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ತಂಡ ಕ್ಲೈವ್ ಮದಾಂದೆ(ಔಟಾಗದೆ 29 ರನ್, 25 ಎಸೆತ), ಡಿಯೊನ್ ಮಯೆರ್ಸ್(23 ರನ್, 22 ಎಸೆತ) ಹಾಗೂ ಬ್ರಿಯನ್ ಬೆನ್ನೆಟ್(22 ರನ್, 15 ಎಸೆತ) ಹಾಗೂ ವೆಸ್ಲೆ ಮಧೆವೆರೆ(21 ರನ್, 22 ಎಸೆತ)ಪ್ರಯತ್ನದ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು.

ಭಾರತದ ಬೌಲಿಂಗ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್(4-13)ಯಶಸ್ವಿ ಪ್ರದರ್ಶನ ನೀಡಿದರು. ವಾಶಿಂಗ್ಟನ್ ಸುಂದರ್(2-11)ಎರಡು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News