ಮಲೇಶ್ಯ ಓಪನ್: ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣಯ್, ಟ್ರೀಸಾ-ಗಾಯತ್ರಿಗೆ ಸೋಲು

Update: 2025-01-09 16:33 GMT

ಪ್ರಣಯ್, ಟ್ರೀಸಾ-ಗಾಯತ್ರಿ | PC : PTI 

ಕೌಲಾಲಂಪುರ : ಚೀನಾದ ಲಿ ಶಿಫೆಂಗ್ ವಿರುದ್ಧ ಕಠಿಣ ಹೋರಾಟ ನೀಡಿದರೂ ಭಾರತದ ಶಟ್ಲರ್ ಎಚ್.ಎಸ್.ಪ್ರಣಯ್ ಮಲೇಶ್ಯ ಓಪನ್‌ನಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಸೋತಿದ್ದಾರೆ.

ಮೊದಲ ಗೇಮ್ ಅನ್ನು 8-21 ಅಂತರದಿಂದ ಸೋತಿದ್ದ ಪ್ರಣಯ್ 2ನೇ ಗೇಮ್ ಅನ್ನು 21-15ರಿಂದ ಜಯಿಸಿ ತಿರುಗೇಟು ನೀಡಿದರು. ಆದರೆ 3ನೇ ಗೇಮ್‌ನ್ನು 23-21 ಅಂತರದಿಂದ ಗೆದ್ದಿರುವ ಚೀನಾ ಆಟಗಾರ ಮೇಲುಗೈ ಸಾಧಿಸಿದರು.

ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಚೀನಾದ ಝಾಂಗ್ ಶುಕ್ಸಿಯಾನ್ ಹಾಗೂ ಜಿಯಾ ಯಿಫಾನ್ ಎದುರು 21-15, 18-21, 19-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.

ಮಿಶ್ರ ಡಬಲ್ಸ್ ಜೋಡಿ ಧ್ರುವ ಕಪಿಲ ಹಾಗೂ ತನಿಶಾ ಕ್ರಾಸ್ಟೊ ಚೀನಾದ ಝಾಂಗ್ ಚಿ ಹಾಗೂ ಚೆಂಗ್ ಕ್ಸಿಂಗ್ ವಿರುದ್ಧ 13-21, 20-22 ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News