ಜೊಕೊವಿಕ್‌ಗೆ ಭಾರತ ಮೂಲದ ನಿಶೇಶ್ ಬಸವರೆಡ್ಡಿ ಮೊದಲ ಎದುರಾಳಿ

Update: 2025-01-09 16:01 GMT

ನಿಶೇಶ್ ಬಸವರೆಡ್ಡಿ , ಜೊಕೊವಿಕ್‌ | PTI 

ಸಿಡ್ನಿ : ಮೆಲ್ಬರ್ನ್‌ನಲ್ಲಿ ಗುರುವಾರ ನಡೆದ ಡ್ರಾ ಕಾರ್ಯಕ್ರಮದ ಪ್ರಕಾರ ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಚಿಲಿಯ ನಿಕೊಲಸ್ ಜರ್ರಿ ಅವರನ್ನು ಎದುರಿಸುವ ಮೂಲಕ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಹೋರಾಟ ಆರಂಭಿಸಲಿದ್ದಾರೆ.

10 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅಮೆರಿಕದ 19ರ ಹರೆಯದ ಆಟಗಾರ ನಿಶೇಶ್ ಬಸವರೆಡ್ಡಿ ಅವರನ್ನು ಎದುರಿಸಲಿದ್ದಾರೆ. ಭಾರತ ಮೂಲದ ಬಸವರೆಡ್ಡಿಗೆ ವೈಲ್ಡ್‌ಕಾರ್ಡ್ ನೀಡಲಾಗಿದೆ. ಬಸವರೆಡ್ಡಿ ಕುಟುಂಬ ಹೈದರಾಬಾದ್ ಹಾಗೂ ನೆಲ್ಲೂರ್‌ನಲ್ಲಿದ್ದಾರೆ. ಬಾಲ್ಯದಿಂದಲೂ ಭಾರತಕ್ಕೆ ಭೇಟಿ ನೀಡಿದ್ದಾರೆ. ಜೊಕೊವಿಕ್ ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಕರಾಝ್ ಹಾಗೂ ಸೆಮಿ ಫೈನಲ್‌ನಲ್ಲಿ ಝ್ವೆರೆವ್‌ರನ್ನು ಎದುರಿಸುವ ಸಾಧ್ಯತೆ ಇದೆ.

3ನೇ ಶ್ರೇಯಾಂಕದ ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರು ಮೊದಲ ಸುತ್ತಿನಲ್ಲಿ ಕಝಕ್‌ಸ್ತಾನದ ಅಲೆಕ್ಸಾಂಡರ್ ಶೆವ್‌ಚೆಂಕೊರನ್ನು ಎದುರಿಸಲಿದ್ದಾರೆ.

ಜರ್ಮನಿಯ 2ನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಫ್ರೆಂಚ್‌ನ ವೈಲ್ಡ್‌ಕಾರ್ಡ್ ಆಟಗಾರ ಲುಕಾಸ್ ಪೌಲಿ ಅವರ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ಕಳೆದ ವರ್ಷ ಯು.ಎಸ್. ಓಪನ್ ರನ್ನರ್ಸ್ ಅಪ್ ಟೇಲರ್ ಫ್ರಿಟ್ಜ್ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಜಿನ್ಸನ್ ಬ್ರೂಕ್ಸ್‌ಬೈ ಅವರ ಸವಾಲನ್ನು ಎದುರಿಸಲಿದ್ದಾರೆ. ಫ್ರಿಟ್ಝ್ ಅವರು ಸೆಮಿ ಫೈಲ್‌ನಲ್ಲಿ ಸಿನ್ನರ್‌ರನ್ನು ಎದುರಿಸಬಹುದು. 2024ರ ಯು.ಎಸ್. ಓಪನ್ ಫೈನಲ್‌ನಲ್ಲೂ ಈ ಇಬ್ಬರು ಸೆಣಸಾಡಿದ್ದರು.

3 ಬಾರಿ ಆಸ್ಟ್ರೇಲಿಯನ್ ಓಪನ್ ರನ್ನರ್ಸ್ ಅಪ್ ಡೇನಿಯಲ್ ಮೆಡ್ವೆಡೆವ್ ಥಾಯ್ಲೆಂಡ್‌ನ ವೈಲ್ಡ್‌ಕಾರ್ಡ್ ಆಟಗಾರ ಕಾಸಿಡಿಟ್ ಸಮ್ರೆಜ್‌ರನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News