ಭಾರತದ ಪರ ಚೊಚ್ಚಲ ಪಂದ್ಯ ಆಡಲು ಈಗಲೂ ಕಾಯತ್ತಿರುವ ಈಶ್ವರನ್

Update: 2025-01-08 17:41 GMT

ಅಭಿಮನ್ಯು ಈಶ್ವರನ್ | PC : PTI 

ಹೊಸದಿಲ್ಲಿ: ಭಾರತದ ಯುವ ಆಟಗಾರ ಅಭಿಮನ್ಯು ಈಶ್ವರನ್ ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಹಾಗೂ ಭಾರತ ಎ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯ ಆಡುವ ಅವಕಾಶಕ್ಕಾಗಿ ಕಾಯುವುದನ್ನು ಮುಂದುವರಿಸಿದ್ದಾರೆ.

ದೀರ್ಘ ಇನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿರುವ ಈಶ್ವರನ್ ದಶಕದಿಂದ ದೇಶೀಯ ಕ್ರಿಕೆಟ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಹಲವು ಬಾರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಅವಕಾಶ ಲಭಿಸಿಲ್ಲ.

2021ರಲ್ಲಿ ಈಶ್ವರನ್ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ್ದ ಸ್ವದೇಶಿ ಸರಣಿಗೆ ಮೀಸಲು ಆಟಗಾರನಾಗಿ ಆಯ್ಕೆಯಾದರು. ಕೆಲವು ತಿಂಗಳ ನಂತರ 2021ರ ಮೇನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆ ಮೀಸಲು ಆಟಗಾರನಾಗಿ ನೇಮಕಗೊಂಡರು. ಎರಡೂವರೆ ವರ್ಷಗಳ ನಂತರ 2023ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಗಾಯಾಳು ಋತುರಾಜ್ ಗಾಯಕ್ವಾಡ್ ಬದಲಿಗೆ ಆಯ್ಕೆಯಾದರು. ಈ ಬಾರಿ ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆದರು. ಆದರೆ ಒಂದೂ ಪಂದ್ಯ ಆಡಲಿಲ್ಲ.

29ರ ಹರೆಯದ ಈಶ್ವರನ್ ದೇಶೀಯ ಕ್ರಿಕೆಟ್‌ನಲ್ಲಿ 101 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 7,600 ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 29 ಅರ್ಧಶತಕಗಳಿವೆ. ಇದು ಅವರ ಸ್ಥಿರತೆ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಇನಿಂಗ್ಸ್ ಆಡುವ ಸಾಮರ್ಥ್ಯವನ್ನು ಬಿಂಬಿಸುತ್ತಿದೆ.

ತನ್ನ 6 ಪ್ರಥಮ ದರ್ಜೆ ಪಂದ್ಯಗಳಲ್ಲಿ 5 ಶತಕಗಳನ್ನು ಗಳಿಸಿದ ಸಂದರ್ಭದಲ್ಲಿ ತಂಡಕ್ಕೆ ಕರೆ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News