ಎಎಸ್‌ಬಿ ಕ್ಲಾಸಿಕ್ ಟೆನಿಸ್ ಟೂರ್ನಿ | ಯೂಕಿ ಭಾಂಬ್ರಿ ಜೋಡಿ ಸೆಮಿ ಫೈನಲ್‌ಗೆ

Update: 2025-01-09 16:28 GMT

ಅಲ್ಬಾನೊ ಒಲಿವೆಟ್ಟಿ, ಯೂಕಿ ಭಾಂಬ್ರಿ | PC : X  \ @kreedonworld

ಆಕ್ಲಂಡ್: ಭಾರತದ ಯೂಕಿ ಭಾಂಬ್ರಿ ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಅವರೊಂದಿಗೆ ಎಎಸ್‌ಬಿ ಕ್ಲಾಸಿಕ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಗುರುವಾರ 1 ಗಂಟೆ, 21 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಭಾಂಬ್ರಿ ಹಾಗೂ ಒಲಿವೆಟ್ಟಿ ಮೊದಲ ಸೆಟ್ ಸೋಲಿನಿಂದ ಹೊರಬಂದು 3ನೇ ಶ್ರೇಯಾಂಕದ ಬ್ರಿಟನ್ ಜೋಡಿ ಜುಲಿಯನ್ ಕಾಶ್ ಹಾಗೂ ಲಿಯೊಡ್ ಗ್ಲಾಸ್‌ಪೂಲ್‌ರನ್ನು 3-6, 6-4, 12-10 ಸೆಟ್‌ಗಳ ಅಂತರದಿಂದ ಮಣಿಸಿದರು.

ಭಾಂಬ್ರಿ ಜೋಡಿ ಸೆಮಿ ಫೈನಲ್‌ನಲ್ಲಿ ಅಮೆರಿಕದ ಜೋಡಿ ಕ್ರಿಸ್ಟಿಯನ್ ಹ್ಯಾರಿಸನ್ ಹಾಗೂ ರಾಜೀವ್ ರಾಮ್‌ರನ್ನು ಎದುರಿಸಲಿದ್ದಾರೆ. ಹ್ಯಾರಿಸನ್ ಹಾಗೂ ರಾಮ್ ಮತ್ತೊಂದು ಕ್ವಾ.ಫೈನಲ್‌ನಲ್ಲಿ ಫ್ರಾನ್ಸ್‌ನ ಸಾಡಿಯೊ ಡೌಂಬಿಯಾ ಹಾಗೂ ಫ್ಯಾಬಿಯೆನ್ ರೆಬೌಲ್‌ರನ್ನು 7-5, 6-7(4), 10-5 ಅಂತರದಿಂದ ಸೋಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News