ಇದು ನನ್ನ ಕೊನೆಯ ಯುರೋಪಿಯನ್ ಚಾಂಪಿಯನ್ ಶಿಪ್ : ರೊನಾಲ್ಡೊ

Update: 2024-07-03 15:19 GMT

ಕ್ರಿಸ್ಟಿಯಾನೊ ರೊನಾಲ್ಡೊ |  PC : PTI 

ಹ್ಯಾಂಬರ್ಗ್ : ಈ ವರ್ಷದ ಯುರೋಪಿಯನ್ ಚಾಂಪಿಯನ್ ಶಿಪ್ ನನ್ನ ವೃತ್ತಿಜೀವನದ ಕೊನೆಯ ಟೂರ್ನಿಯಾಗಿದೆ ಎಂದು ಪೋರ್ಚುಗಲ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ದೃಢಪಡಿಸಿದ್ದಾರೆ.

39ರ ಹರೆಯದ ರೊನಾಲ್ಡೊ ಆರನೇ ಬಾರಿ ಯುರೋಸ್ ನಲ್ಲಿ ಆಡಿ ದಾಖಲೆ ನಿರ್ಮಿಸಿದ್ದಾರೆ. ತನ್ನ ತಂಡ ಕ್ವಾರ್ಟರ್ ಫೈನಲ್ ಗೆ ತಲುಪುವಲ್ಲಿ ನೆರವಾಗಿದ್ದಾರೆ.

ಸೋಮವಾರ ಸ್ಲೊವೇನಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ಜಯ ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೊನಾಲ್ಡೊ, ಇದು ನನ್ನ ಕೊನೆಯ ಯುರೋಪಿಯನ್ ಚಾಂಪಿಯನ್ ಶಿಪ್ ಎನ್ನುವುದರಲ್ಲಿ ಸಂಶಯವೇ ಇಲ್ಲ ಎಂದರು.

ಆದರೆ ಈ ಕಾರಣಕ್ಕೆ ಭಾವುಕನಾಗಿರಲಿಲ್ಲ. ಫುಟ್ಬಾಲ್ ಆಟದ ಬಗ್ಗೆ ನನಗಿರುವ ಉತ್ಸಾಹ, ನನ್ನ ಬೆಂಬಲಿಗರನ್ನು ನೋಡುವ ಉತ್ಸಾಹ, ನನ್ನ ಕುಟುಂಬ, ಜನರು ನನ್ನ ಕುರಿತು ಹೊಂದಿರುವ ಪ್ರೀತಿಯಿಂದ ಪ್ರಭಾವಿತನಾಗಿದ್ದೇನೆ ಎಂದು ರೊನಾಲ್ಡೊ ಹೇಳಿದ್ದಾರೆ.

ಫುಟ್ಬಾಲ್ ನಲ್ಲಿ ಅತ್ಯಂತ ಪ್ರಮುಖ ಸ್ಕೋರರ್ಗಳಲ್ಲಿ ಒಬ್ಬರಾಗಿರುವ, ಯುರೋಪಿಯನ್ ಚಾಂಪಿಯನ್ ಶಿಪ್ ಗಳಲ್ಲಿ ದಾಖಲೆಯ 14 ಗೋಲುಗಳನ್ನು ಗಳಿಸಿರುವ ರೊನಾಲ್ಡೊ, ಜನರನ್ನು ಸಂತೋಷಪಡಿಸುವುದು ನನ್ನ ಮುಖ್ಯ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News