ಕರ್ನಲ್ ಸಿ.ಕೆ. ನಾಯುಡು ಟ್ರೋಫಿ | ಅಜೇಯ 426 ರನ್ ಗಳಿಸಿ ನೂತನ ದಾಖಲೆ ಬರೆದ ಹರ್ಯಾಣದ ಯಶವರ್ಧನ್ ದಲಾಲ್

Update: 2024-11-09 16:58 GMT

ಯಶವರ್ಧನ್ ದಲಾಲ್ | PC : Yashvardhan Dalal's Instagram 

ಹೊಸದಿಲ್ಲಿ: ಕರ್ನಲ್ ಸಿ.ಕೆ. ನಾಯುಡು ಟ್ರೋಫಿ ಪಂದ್ಯಾವಳಿಯಲ್ಲಿ ಶನಿವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಹರ್ಯಾಣದ ಯಶವರ್ಧನ್ ದಲಾಲ್ 58 ಬೌಂಡರಿಗಳನ್ನು ಒಳಗೊಂಡ ಅಜೇಯ ಚತುಃಶತಕ ಬಾರಿಸಿದ್ದಾರೆ.

ಅವರು ಬಾರಿಸಿದ ಅಜೇಯ 426 ರನ್‌ಗಳು ಪಂದ್ಯಾವಳಿಯ ನೂತನ ದಾಖಲೆಯಾಗಿದೆ. ಕಳೆದ ಋತುವಿನಲ್ಲಿ, ಉತ್ತರಪ್ರದೇಶದ ಸಮೀರ್ ಗರಿಷ್ಠ ವೈಯಕ್ತಿಕ ಮೊತ್ತ 312 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಯಶವರ್ಧನ್ ದಲಾಲ್ ಮುರಿದಿದ್ದಾರೆ.

ಹರ್ಯಾಣದ ಸುಲ್ತಾನ್‌ಪುರದಲ್ಲಿರುವ ಗುರುಗ್ರಾಮ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಂದು ದಲಾಲ್ ಬಾರಿಸಿದ ಚತುಃಶತಕದಲ್ಲಿ 46 ಬೌಂಡರಿಗಳು ಮತ್ತು 12 ಸಿಕ್ಸರ್‌ಗಳಿದ್ದವು.

ಶುಕ್ರವಾರ ಟಾಸ್ ಗೆದ್ದ ಮುಂಬೈ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತ್ತು. ಆರಂಭಿಕರಾದ ದಲಾಲ್ ಮತ್ತು ಅರ್ಶ ರಂಗ ಹರ್ಯಾಣಕ್ಕೆ ಅಮೋಘ ಆರಂಭವನ್ನು ಒದಗಿಸಿದರು. ಅವರು ಮೊದಲ ವಿಕೆಟ್‌ಗೆ 410 ರನ್‌ಗಳನ್ನು ಸೇರಿಸಿದರು. ಉಭಯ ಆಟಗಾರರು ಶತಕಗಳನ್ನು ಬಾರಿಸಿದರು.

ರಂಗ 151 ರನ್‌ಗೆ ನಿರ್ಗಮಿಸಿದ ಬಳಿಕವೂ ದಲಾಲ್ ತನ್ನ ಆಕ್ರಮಣಕಾರಿ ಬ್ಯಾಟಿಂಗನ್ನು ಮುಂದುವರಿಸಿದರು. ಎರಡನೇ ದಿನದಾಟದ ಮುಕ್ತಾಯಕ್ಕೆ ಹರ್ಯಾಣವು 8 ವಿಕೆಟ್‌ಗಳ ನಷ್ಟಕ್ಕೆ 732 ರನ್‌ಗಳನ್ನು ಗಳಿಸಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News