ಸಚಿನ್, ಕೊಹ್ಲಿ, ಬಾಬರ್ ಅಝಂ ದಾಖಲೆ ಪುಡಿಗಟ್ಟಿದ ಅಫ್ಘಾನ್ ಬ್ಯಾಟರ್ ಗುರ್ಬಝ್!

Update: 2024-11-12 05:24 GMT

Photo: x.com/ACBofficials

ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ  ಅಫ್ಘಾನಿಸ್ತಾನದ ಬ್ಯಾಟರ್ ರಹ್ಮಾನುಲ್ಲಾ ಗುರ್ಬಝ್ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎಂಟು ಶತಕಗಳನ್ನು ಗಳಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ವಿಶಿಷ್ಟ ದಾಖಲೆಗೆ ಪಾತ್ರರಾದರು.

ಶಾರ್ಜಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಜ್ಮತ್ತುಲ್ಲಾ ಒಮರ್ಝಾಯಿ (77 ಎಸೆತಗಳಲ್ಲಿ 70) ಅವರ ಜತೆ ಸೇರಿದ ಶತಕವೀರ ತಮ್ಮ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ ಗಳ ಜಯ ತಂದುಕೊಟ್ಟರು. ಈ ಮೂಲಕ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿತು.

120 ಎಸೆತಗಳಲ್ಲಿ 101 ರನ್ ಗಳಿಸಿದ ಯುವ ಬ್ಯಾಟರ್ 22 ವರ್ಷ 349 ದಿನದಲ್ಲಿ ಎಂಟನೇ ಏಕದಿನ ಶತಕ ಸಾಧಿಸಿದ ಗೌರವಕ್ಕೆ ಪಾತ್ರರಾದರು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು 22 ವರ್ಷ 357 ದಿನದಲ್ಲಿ, ವಿರಾಟ್ ಕೊಹ್ಲಿ 23 ವರ್ಷ 27 ದಿನದಲ್ಲಿ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ಬ್ಯಾಟರ್ ಬಾಬರ್ ಅಝಂ 23 ವರ್ಷ 280 ದಿನದಲ್ಲಿ ಎಂಟನೇ ಏಕದಿನ ಶತಕ ಗಳಿಸಿದ್ದರು.

ಎಂಟು ಏಕದಿನ ಶತಕವನ್ನು ಅತ್ಯಂತ ಎಳೆ ವಯಸ್ಸಿನಲ್ಲಿ ಸಿಡಿಸಿದ ದಾಖಲೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಹೆಸರಿನಲ್ಲಿದೆ. ಎಂಟನೇ ಏಕದಿನ ಶತಕ ಬಾರಿಸಿದಾಗ ಅವರಿಗೆ 22 ವರ್ಷ 312 ದಿನ ಮಾತ್ರ ಆಗಿತ್ತು. ಗುರ್ಬಝ್ ಅವರು ಅಫ್ಘಾನಿಸ್ತಾನ ಪರ ಅತಿಹೆಚ್ಚು ದಾಖಲೆ ಗಳಿಸಿದ ದಾಖಲೆಯನ್ನೂ ಹೊಂದಿದ್ದು, ಮುಹಮ್ಮದ್ ಶಹಬಾದ್ ಆರು ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಸರಣಿ ಗೆಲುವಿಗೆ 245 ರನ್ ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಗುರ್ಬಝ್ ಮತ್ತು ಒಮರ್ಝಾಯಿ ಅವರ ಅದ್ಭುತ ಆಟದಿಂದ 49 ಓವರ್ ಗಳಲ್ಲಿ ಗುರಿ  ತಲುಪಿತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News