ಸಾಮಾನ್ಯ ಕಾಯಿಲೆಗಳಿಗೆ ಕೆಲಸ ಮಾಡದ ಆ್ಯಂಟಿಬಯೋಟಿಕ್ಸ್ : ಐಸಿಎಮ್‌ಆರ್ ವರದಿ

Update: 2024-09-23 17:07 GMT

ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ : ಮೂತ್ರ ನಾಳದ ಸೋಂಕುಗಳು (ಯುಟಿಐ), ರಕ್ತದ ಸೋಂಕುಗಳು, ಶ್ವಾಸಕೋಶದ ಉರಿಯೂತ ಮತ್ತು ಟೈಫಾಯ್ಡ್ ಮುಂತಾದ ಕಾಯಿಲೆಗಳು, ಸಾಮಾನ್ಯವಾಗಿ ಬಳಸುವ ಪ್ರತಿಜೀವಕ (ಆ್ಯಂಟಿಬಯೋಟಿಕ್ಸ್)ಗಳಿಗೆ ನಿರೋಧತೆಯನ್ನು ಬೆಳೆಸಿಕೊಂಡಿದ್ದು ಅವುಗಳಿಗೆ ಚಿಕಿತ್ಸೆಯು ಕಷ್ಟವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಮ್‌ಆರ್)ಯ ಇತ್ತೀಚಿನ ವರದಿಯೊಂದು ತಿಳಿಸಿದೆ.

ಮೇಲಿನ ಶ್ವಾಸಕೋಶ ಸೋಂಕುಗಳು, ಜ್ವರಗಳು, ಭೇದಿ, ಶ್ವಾಸಕೋಶದ ಉರಿಯೂತ, ಗಾಯ ಕೊಳೆಯುವುದು, ಕಮ್ಯುನಿಟಿ-ಅಕ್ವಯರ್ಡ್ ನ್ಯುಮೋನಿಯ ಮತ್ತು ವಿವಿಧ ರಕ್ತದ ಸೋಂಕುಗಳ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸುವ ಪ್ರತಿಜೀವಕಗಳ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಐಸಿಎಮ್‌ಆರ್ ತನ್ನ 2023ನೇ ಸಾಲಿನ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.

ದೇಶಾದ್ಯಂತವಿರುವ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಂದ ಪಡೆಯಲಾದ 2023 ಜನವರಿ 1ರಿಂದ ಡಿಸೆಂಬರ್ 31ರವರೆಗಿನ ಅವಧಿಯ ದತ್ತಾಂಶಗಳ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಸಂಶೋಧಕರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಪಡೆದಿರುವ 99,492 ಮಾದರಿಗಳನ್ನು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News