ಏಷ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್: 20 ಕಿ.ಮೀ.ರೇಸ್ ವಾಕ್ ನಲ್ಲಿ ಬೆಳ್ಳಿ, ಕಂಚಿನ ಪದಕ ಗೆದ್ದ ಪ್ರಿಯಾಂಕಾ, ವಿಕಾಸ್
Update: 2023-07-16 12:57 GMT
ಹೊಸದಿಲ್ಲಿ: ಬ್ಯಾಂಕಾಕ್ ನಲ್ಲಿ ರವಿವಾರ ನಡೆದ ಏಷ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನ 20 ಕಿಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಹಾಗೂ ವಿಕಾಸ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಪ್ರಿಯಾಂಕಾ ಅವರು ಚೀನಾದ ಯಾಂಗ್ ಲಿಯುಜಿಂಗ್ ಅವರ ನಂತರ ಮಹಿಳೆಯರ ವಿಭಾಗದಲ್ಲಿ 1:34:24 ಸಮಯದಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ತನ್ನ ವೈಯಕ್ತಿಕ ಶ್ರೇಷ್ಠ ಸಮಯ(1:25.45)ಕ್ಕಿಂತ ತುಂಬಾ ಹಿಂದುಳಿದರು.
ಭಾವನಾ ಜಾಟ್ ಈವೆಂಟ್ ನಲ್ಲಿ 1:38:26 ಸಮಯದೊಂದಿಗೆ ಐದನೇ ಸ್ಥಾನವನ್ನು ಗಳಿಸಿದರು.
ಮತ್ತೊಂದೆಡೆ ವಿಕಾಸ್ ಪುರುಷರ 20 ಕಿಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಜಪಾನಿನ ಯುಟಾರೊ ಮುರಯಾಮಾ (1:24:40) ಹಾಗೂ ಚೀನಾದ ವಾಂಗ್ ಕೈಹುವಾ (1:25:29) ನಂತರ 1:29:32 ಸಮಯದೊಂದಿಗೆ ಗುರಿ ತಲುಪಿ ಕಂಚಿನ ಪದಕ ಗೆದ್ದರು.