ಆಸ್ಟ್ರೇಲಿಯದ ವಿರುದ್ಧ ಸುಸ್ಥಿತಿಯಲ್ಲಿ ಭಾರತದ ಅಂಡರ್-19 ಕ್ರಿಕೆಟ್ ತಂಡ

Update: 2024-10-07 15:02 GMT
PC ; X 

ಚೆನ್ನೈ : ನಿತ್ಯ ಪಾಂಡ್ಯ(94 ರನ್, 135 ಎಸೆತ), ಕಾರ್ತಿಕೇಯ(71 ರನ್, 99 ಎಸೆತ), ಸೋಹಮ್ ಪಟವರ್ಧನ್(ಔಟಾಗದೆ 61, 120 ಎಸೆತ) ಹಾಗೂ ನಿಖಿಲ್ ಕುಮಾರ್(61 ರನ್,93 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಅಂಡರ್-19 ಕ್ರಿಕೆಟ್ ತಂಡ ಆಸ್ಟ್ರೇಲಿಯದ ಅಂಡರ್-19 ತಂಡದ ವಿರುದ್ಧದ ಎರಡನೇ ಯೂತ್ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಉತ್ತಮ ಮೊತ್ತ ಗಳಿಸಿದೆ.

ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

23ನೇ ಓವರ್‌ನಲ್ಲಿ 60 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ತಂಡವು ಕಳಪೆ ಆರಂಭ ಪಡೆಯಿತು. ವೈಭವ್ ಮಲ್ಹೋತ್ರಾ(10 ರನ್, 75 ಎಸೆತ)ಹಾಗೂ ವೈಭವ್ ಸೂರ್ಯವಂಶಿ(3 ರನ್)ಬೇಗನೆ ವಿಕೆಟ್ ಕೈಚೆಲ್ಲಿದರು.

ಆಗ ಜೊತೆಯಾದ ನಿತ್ಯ ಪಾಂಡ್ಯ ಹಾಗೂ ಕಾರ್ತಿಕೇಯ ಮೂರನೇ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಪಾಂಡ್ಯ ಹಾಗೂ ಕಾರ್ತಿಕೇಯ 4 ಓವರ್‌ಗಳ ಅಂತರದಲ್ಲಿ ಔಟಾದ ನಂತರ ಇನಿಂಗ್ಸ್‌ಗೆ ಆಧಾರವಾದ ಸೋಹಮ್ ಪಟವರ್ಧನ್ ಹಾಗೂ ನಿಖಿಲ್ ಕುಮಾರ್ 5ನೇ ವಿಕೆಟ್‌ಗೆ 105 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300ರ ಗಡಿ ತಲುಪಿಸಿದರು. ಬಲಗೈ ಬ್ಯಾಟರ್ ಪಾಂಡ್ಯ 135 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 94 ರನ್ ಗಳಿಸಿ ಕೇವಲ ಆರು ರನ್‌ನಿಂದ ಶತಕ ವಂಚಿತರಾದರು.

120 ಎಸೆತಗಳಲ್ಲಿ ಔಟಾಗದೆ 61 ರನ್ ಗಳಿಸಿರುವ ಸೋಹಮ್ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಹರ್‌ವಂಶ್(ಔಟಾಗದೆ 7) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯದ ಪರ ಹ್ಯಾರಿ ಹೊಸ್ಟ್ರಾ(2-29)ಯಶಸ್ವಿ ಪ್ರದರ್ಶನ ನೀಡಿದರು.

ಮೊದಲ ಪಂದ್ಯವನ್ನು 2 ವಿಕೆಟ್ ಅಂತರದಿಂದ ಗೆದ್ದುಕೊಂಡಿರುವ ಭಾರತವು ಯೂತ್ ಟೆಸ್ಟ್ ಸರಣಿಯಲ್ಲಿ ಸದ್ಯ 1-0 ಮುನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್

ಭಾರತದ ಅಂಡರ್-19 ತಂಡ: 90 ಓವರ್‌ಗಳಲ್ಲಿ 316/5

(ನಿತ್ಯ ಪಾಂಡ್ಯ 94, ಕಾರ್ತಿಕೇಯ 71, ಸೋಹಮ್ ಪಟವರ್ಧನ್ ಔಟಾಗದೆ 61, ನಿಖಿಲ್ ಕುಮಾರ್ 61, ಹ್ಯಾರಿ ಹೋಕ್ಸ್ಟಾ2-29)


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News