ಬುಮ್ರಾ ಘಾತಕ ದಾಳಿಗೆ ಆಸ್ಟ್ರೇಲಿಯ ನಾಟಕೀಯ ಕುಸಿತ

Update: 2024-12-15 12:49 IST
Bumrah

ಜಸ್‌ಪ್ರೀತ್ ಬುಮ್ರಾ | credit: X/BCCI

  • whatsapp icon

ಬ್ರಿಸ್ಬೇನ್: ಮೂರು ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ ತಂಡ, ಜಸ್‌ಪ್ರೀತ್ ಬುಮ್ರಾರ ಘಾತಕ ದಾಳಿಗೆ ನಾಟಕೀಯ ಪತನಗೊಂಡಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಆರು ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದೆ.

ಸ್ಟೀವನ್ ಸ್ಮಿತ್ (101) ಹಾಗೂ ಟ್ರಾವಿಸ್ ಹೆಡ್ (152) ನಡುವಿನ ದ್ವಿಶತಕದ ಜೊತೆಯಾಟದಿಂದ ಆಸ್ಟ್ರೇಲಿಯ ಬೃಹತ್ ಮೊತ್ತ ಗಳಿಸುವತ್ತ ಮುನ್ನುಗ್ಗುತ್ತಿತ್ತು. ಈ ಹೊತ್ತಿನಲ್ಲಿ ದಾಳಿಗಿಳಿದ ಬುಮ್ರಾ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್ ಹಾಗೂ ಮಾರ್ಶ್ ವಿಕೆಟ್ ಕಿತ್ತು ಭಾರತ ತಂಡ ಮತ್ತೆ ಮೇಲುಗೈ ಸಾಧಿಸುವಂತೆ ಮಾಡಿದರು. ಇದರೊಂದಿಗೆ ಐದು ವಿಕೆಟ್‌ಗಳ ಗೊಂಚಲನ್ನೂ ತಮ್ಮ ಖಾತೆಗೆ ಜಮಾ ಮಾಡಿಕೊಂಡರು.




Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News